Advertisement

ಹಾಪ್‌ಮನ್‌ ಕಪ್‌ ಟೆನಿಸ್‌; ಕ್ರೊವೇಶಿಯಾ- ಸ್ವಿಜರ್ಲೆಂಡ್‌ ಫೈನಲ್‌

12:36 AM Jul 24, 2023 | Team Udayavani |

ನೈಸ್‌ (ಸ್ಪೇನ್‌): ಆತಿಥೇಯ ಸ್ಪೇನ್‌ ತಂಡದ ಮಿಕ್ಸೆಡ್‌ ಡಬಲ್ಸ್‌ ಜೋಡಿ ಕಾರ್ಲೋಸ್‌ ಅಲ್ಕರಾಜ್‌-ರೆಬೆಕಾ ಮಸರೋವಾ ಅವ ರನ್ನು ಮಣಿಸಿದ ಬೊರ್ನ ಕೊರಿಕ್‌-ಡೋನಾ ವೆಕಿಕ್‌, ಕ್ರೊವೇಶಿಯಾವನ್ನು “ಹಾಪ್‌ಮನ್‌ ಕಪ್‌ ಟೆನಿಸ್‌’ ಫೈನಲ್‌ಗೆ ಮುನ್ನಡೆಸಿದ್ದಾರೆ. 2-1 ಅಂತರದ ಮೇಲುಗೈ ಸಾಧಿಸಿದ ಕ್ರೊವೇಶಿಯಾ, ಫೈನಲ್‌ನಲ್ಲಿ ಸ್ವಿಜರ್ಲೆಂಡ್‌ ವಿರುದ್ಧ ಆಡಲಿದೆ.

Advertisement

ನಿರ್ಣಾಯಕ 3ನೇ ಪಂದ್ಯದಲ್ಲಿ ಬೊರ್ನ ಕೊರಿಕ್‌-ಡೋನಾ ವೆಕಿಕ್‌ 1-6, 6-4, 14-12 ಅಂತರದಿಂದ ಕಾರ್ಲೋಸ್‌ ಅಲ್ಕರಾಜ್‌-ರೆಬೆಕಾ ಮಸರೋವಾ ಜೋಡಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು.

ವಿಂಬಲ್ಡನ್‌ ಚಾಂಪಿಯನ್‌, ವಿಶ್ವದ ನಂ.1 ಆಟಗಾರ ಕಾರ್ಲೋಸ್‌ ಅಲ್ಕರಾಜ್‌ ದ್ವಿತೀಯ ಪಂದ್ಯದಲ್ಲಿ ಬೊರ್ನ ಕೊರಿಕ್‌ ಅವರನ್ನು 6-3, 6-7 (6-8), 10-5 ಅಂತರದಿಂದ ಮಣಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದಿದ್ದರು. ಇದಕ್ಕೂ ಮುನ್ನ ಡೋನಾ ವೆಕಿಕ್‌ ಅವರು ರೆಬೆಕಾ ಮಸರೋವಾ ವಿರುದ್ಧ 6-2, 6-1 ಅಂತರದ ಸುಲಭ ಗೆಲುವು ಸಾಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next