Advertisement

“ಪ್ರಾಮಾಣಿಕ ಸೇವೆ –ನಾವೇ ಮೊದಲಿಗರು’

02:45 PM May 07, 2017 | |

ಕೋಟ: ಆಡಳಿತ ಮಂಡಳಿ ಮತ್ತು ಸಿಬಂದಿ ವರ್ಗವು ಗ್ರಾಹಕರಿಗೆ ನೀಡುತ್ತಿರುವ ಪಾರದರ್ಶಕ, ಪ್ರಾಮಾಣಿಕ ಸೇವೆಯಿಂದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಸಹಕಾರಿ ಕ್ಷೇತ್ರದಲ್ಲಿ ಪ್ರಥಮ ಸ್ಥಾನಿಯಾಗಿದೆ ಎಂದು ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಮೇ 6ರಂದು ಸಾಸ್ತಾನ ಸಂತ ಅಂತೋನಿ ಇಗರ್ಜಿಯ ವಠಾರದ ದಿ| ಮೋನಪ್ಪ ಶೆಟ್ಟಿ ವೇದಿಕೆಯಲ್ಲಿ ನಡೆದ ಸಾಸ್ತಾನ ಸಹಕಾರಿ ವ್ಯಾವಸಾಯಿಕ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯೊಂದು ಸಹಕಾರಿ ರಂಗದಲ್ಲಿ ನಿರಂತರ 50 ವರ್ಷಗಳ ಸೇವೆ ಸಲ್ಲಿಸುವುದು ಶ್ಲಾಘನೀಯ. ಸಂಸ್ಥೆಯ ಈ ಯಶಸ್ಸಿಗೆ ಆಡಳಿತ ಮಂಡಳಿ ಹಾಗೂ ಸಿಬಂದಿ, ಸದಸ್ಯರ ನಿರಂತರ ಶ್ರಮವೇ ಕಾರಣ ಎಂದರು.

ಸಂಘದ ಅಧ್ಯಕ್ಷ ಪಿ. ಪ್ರತಾಪ್‌ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸುವರ್ಣ ಮಹೋತ್ಸವ ಪ್ರಯುಕ್ತ ಬೆಳಗ್ಗೆ ಸಂಘದ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ, ಪೂರ್ಣಕುಂಭ ಸ್ವಾಗತದೊಂದಿಗೆ ಸಹಕಾರಿ ರಥದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
 
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್‌ ಬಿ. ನಾಯಕ್‌, ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ ಎಂ.ಜೆ., ಪಾಂಡೇಶ್ವರ ಗ್ರಾ.ಪಂ. ಅಧ್ಯಕ್ಷ ಗೋವಿಂದ ಪೂಜಾರಿ, ಐರೋಡಿ ಗ್ರಾ.ಪಂ. ಅಧ್ಯಕ್ಷ ಮೋಸೆಸ್‌ ರೊಡ್ರಿಗಸ್‌, ಮಾಜಿ ಶಾಸಕ ಬಸವರಾಜ್‌, ಸಂಘದ ಮಾಜಿ ಅಧ್ಯಕ್ಷರಾದ ಎ. ಜಗದೀಶ ಕಾರಂತ, ಸಿ.ಎ. ದೇವಾನಂದ, ಆಲೊ#àನ್ಸೋ ಪಿಂಟೋ, ನಿರ್ದೇಶಕರಾದ ಶ್ರೀಧರ ಪಿ.ಎಸ್‌., ಆನಂದ ಗಾಣಿಗ, ಎ. ಜಗನ್ನಾಥ ಬಂಗೇರ, ಲೀಲಾವತಿ ಗಂಗಾಧರ ಪೂಜಾರಿ, ರೇಖಾ ಪದ್ಮನಾಭ ಸುವರ್ಣ, ರಾಮಕೃಷ್ಣ ಐತಾಳ, ಅಣ್ಣಪ್ಪ, ರಾಜಶೇಖರ ಮೊದಲಾದವರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಸುರೇಶ್‌ ಅಡಿಗ ಸ್ವಾಗತಿಸಿ, ಕೇಶವ ಆಚಾರ್ಯ ವಂದಿಸಿದರು. ಮುಖ್ಯ ಕಾರ್ಯಧಿನಿರ್ವಹಣಾಧಿಕಾರಿ ವಿಜಯ ಪೂಜಾರಿ ಪ್ರಸ್ತಾವನೆಗೈದರು. ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶೋದಾ ಸಿ. ಹೊಳ್ಳ, ಸುರೇಶ್‌ ಕಾರ್ಕಡ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next