Advertisement

ಅಂದಲಗಿಗೆ ಗೃಹ ಸಚಿವರ ಭೇಟಿ; ಸಹಕಾರಕ್ಕೆ ಮನವಿ

04:46 AM May 21, 2020 | Team Udayavani |

ಬಂಕಾಪುರ: ಸೀಲ್‌ಡೌನ್‌ ಪ್ರದೇಶವಾದ ಅಂದಲಗಿ ಗ್ರಾಮಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಜನರ ಸಂಕಷ್ಟಗಳನ್ನು ಆಲಿಸಿದರು.

Advertisement

ಕೋವಿಡ್ ವೈರಸ್‌ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಸಾರ್ವಜನಿಕರು ಜಿಲ್ಲಾಡಳಿತದೋಂದಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸೀಲ್‌ಡೌನ್‌ ಪ್ರದೇಶವಾದ ಅಂದಲಗಿ ಗ್ರಾಮದ ಮನೆ ಮನೆಗೆ ಅಗತ್ಯವಾದ ದಿನಸಿ ಸಾಮಗ್ರಿ, ತರಕಾರಿ ಸೇರಿದಂತೆ ಅವಶ್ಯಕ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಮನೆಗಳಿಗೆ ವೈದ್ಯರು ಆಗಮಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ನಿಮ್ಮ ಸಹಕಾರವಿದ್ದರೆ ಹಾವೇರಿ ಜಿಲ್ಲೆ ಪುನಃ ಹಸಿರು ಜಿಲ್ಲೆಯಾಗಿ ಪರಿವರ್ತನೆಯಾಗಲಿದೆ. ಅದಕ್ಕೆ ಸರ್ವರೂ ಸಹಕರಿಸುವಂತೆ ಮನವಿ ಮಾಡಿದರು. ಯಾವುದೇ ಸಮಸ್ಯೆಯಿರಲಿ ನನ್ನನ್ನು ನೇರವಾಗಿ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ. ಧೃತಿಗೆಡದೆ ಆತ್ಮವಿಶ್ವಾಸದಿಂದ ಸರಕಾರದ ಸುರಕ್ಷತಾ ಕ್ರಮ ಅನುಸರಿಸಿ ಕೊರೊನಾ ವೈರಸ್‌ ತೊಲಗಿಸಲು ಮುಂದಾಗುವಂತೆ ಕರೆ ನೀಡಿದರು.

ಡಿಸಿ ಕೃಷ್ಣ ಭಾಜಪೇಯಿ, ಎಸ್ಪಿ ದೇವರಾಜ್‌, ಎಸಿ ಅನ್ನಪೂರ್ಣಾ ಮುದಕಮ್ಮನವರ, ಪಿಎಸ್‌ಐ ಸಂತೋಷಗೌಡ ಪಾಟೀಲ, ಜಿಪ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಎಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ತಹಶೀಲ್ದಾರ್‌ ಪ್ರಕಾಶ ಕುದರಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಬಿಜೆಪಿ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next