ಕೀವ್ : ರಷ್ಯಾ ದಾಳಿಗೆ ಸಿಲುಕಿರುವ ಯುದ್ಧ ಸಂತ್ರಸ್ತ ಉಕ್ರೇನ್ ನಲ್ಲಿ ಇರುವ ಜೀವಗಳೆಲ್ಲವೂ ಭಾದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಇದರಲ್ಲಿ ಗಣ್ಯಾತಿಗಣ್ಯರು, ಸಾಮಾನ್ಯ ಪ್ರಜೆಗಳು ಹೊರತಾಗಿಲ್ಲ. ಸಂಕಷ್ಟಕ್ಕೆ ಸಿಲುಕಿದ್ದ ಅಮೆರಿಕನ್ ನಟ, ಸೀನ್ ಜಸ್ಟಿನ್ ಪೆನ್ ಕಾಲ್ನಡಿಗೆಯಲ್ಲಿ ಉಕ್ರೇನ್ ನಿಂದ ಪೋಲ್ಯಾಂಡ್ ಗಡಿಗೆ ತೆರಳಿದ್ದಾರೆ.
: “ಮೈಲ್ಸ್ ಟು ಪೋಲಿಷ್ ಬಾರ್ಡರ್” ಎಂದು ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಚಿತ್ರವನ್ನು ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕ ಸೀನ್ ಜಸ್ಟಿನ್ ಪೆನ್ ಟ್ವೀಟ್ ಮಾಡಿದ್ದಾರೆ.
“ನಮ್ಮ ಕಾರನ್ನು ರಸ್ತೆಯ ಬದಿಯಲ್ಲಿ ಬಿಟ್ಟು ಬಂದ ನಂತರ ನಾನು ಮತ್ತು ಇಬ್ಬರು ಸಹೋದ್ಯೋಗಿಗಳು ಪೋಲಿಷ್ ಗಡಿಗೆ ಮೈಲುಗಳಷ್ಟು ನಡೆದುಕೊಂಡು ಬಂದೆವು” ಎಂದು ಪೆನ್ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.
ಅಕಾಡೆಮಿ ಪ್ರಶಸ್ತಿ ವಿಜೇತ ನಟ ಮತ್ತು ಅವರ ಸಹಚರರು ತಮ್ಮ ವಾಹನವನ್ನು ಬಿಟ್ಟು ಹೋಗಲು ಯಾಕೆ ಒತ್ತಾಯಿಸಲಾಯಿತು ಎಂಬುದನ್ನು ಟ್ವೀಟ್ ನಲ್ಲಿ ವಿವರಿಸಲಿಲ್ಲ.