Advertisement

Russia ದಿಂದ ಉಕ್ರೇನ್‌ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ

06:23 PM Nov 21, 2024 | Team Udayavani |

ಮಾಸ್ಕೋ: ರಷ್ಯಾ -ಉಕ್ರೇನ್‌ ನಡುವಿನ ಯುದ್ಧ ಸಾವಿರ ದಿನಗಳು ಕಳೆದರೂ ಮುಂದುವರಿದಿದ್ದು, ಉಕ್ರೇನ್ ನಗರ ಡ್ನಿಪ್ರೊವನ್ನು ಗುರಿಯಾಗಿಟ್ಟುಕೊಂಡು ರಷ್ಯಾ ಖಂಡಾಂತರ ಕ್ಷಿಪಣಿಯನ್ನು (Intercontinental ballistic missile) ಹಾರಿಸಿದೆ ಎಂದು ಉಕ್ರೇನ್ ನ ವಾಯುಪಡೆ ಗುರುವಾರ(ನ21) ಹೇಳಿದೆ. ರಷ್ಯಾದ ಅಣ್ವಸ್ತ್ರ ನಿಯಮವನ್ನು ಬದಲಾವಣೆ ಮಾಡಲು ಅಧ್ಯಕ್ಷ ವ್ಲಾಡಿಮಿರ್‌ ಪುತಿನ್‌ ಅನುಮತಿ ನೀಡಿದ ಬಳಿಕ ಶಕ್ತಿಶಾಲಿ ಪರಮಾಣು ಸಾಮರ್ಥ್ಯದ ಅಸ್ತ್ರವನ್ನು ಬಳಸಿದ್ದು ಇದೇ ಮೊದಲ ಬಾರಿಗೆ ಬಳಕೆ ಮಾಡಲಾಗಿದೆ. ಸದ್ಯ ಅಣ್ವಸ್ತ್ರ ದಾಳಿಯ ಭೀತಿ ಎದುರಾಗಿದೆ.

Advertisement

ICBM ಉಡಾವಣೆಯು ದೃಢೀಕರಿಸಲ್ಪಟ್ಟರೆ, ಉಕ್ರೇನ್ ಯುಎಸ್ ಮತ್ತು ಬ್ರಿಟಿಷ್ ಕ್ಷಿಪಣಿಗಳನ್ನು ಉಡಾಯಿಸಿ ಪ್ರತಿಕಾರದ ಎಚ್ಚರಿಕೆಯ ನಡುವೆ ಯುದ್ಧದಲ್ಲಿ ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆ ಇನ್ನಷ್ಟು ಹೆಚ್ಚಿಸಲಿದೆ.

ವಾಷಿಂಗ್ಟನ್ ಪೂರೈಸಿದ ಅತಿ ದೂರದ ಕ್ಷಿಪಣಿಗಳಾದ ATACMS ಅನ್ನು ಉಕ್ರೇನ್ ಬಳಸುವುದು ಸಂಘರ್ಷವನ್ನು ಹೆಚ್ಚಿಸಲು ಬಯಸಿದೆ ಎಂಬುದಕ್ಕೆ ಸ್ಪಷ್ಟ ಸಂಕೇತವಾಗಿದೆ ಎಂದು ರಷ್ಯಾ ಹೇಳಿದೆ.

ಉಕ್ರೇನ್ ಭೂಪ್ರದೇಶದ ಆಳದಲ್ಲಿ 5,800 ಕಿಲೋಮೀಟರ್ ವ್ಯಾಪ್ತಿಯೊಂದಿಗೆ ರಷ್ಯಾ ತನ್ನ RS-26 ರುಬೆಜ್ ಕ್ಷಿಪಣಿಯನ್ನು ಹಾರಿಸಿದೆ ಎಂದು ಹೇಳಲು ಉಕ್ರೇನ್‌ಸ್ಕಾ ಪ್ರಾವ್ಡಾ ಎಂಬ ಕೀವ್ ಮೂಲದ ಮಾಧ್ಯಮ ಆಧಾರಿತ ವರದಿಯನ್ನು ಸುದ್ದಿ ಸಂಸ್ಥೆ ರಾಯಿಟರ್ಸ್ ಉಲ್ಲೇಖಿಸಿದೆ. ಆದರೆ, ಕ್ಷಿಪಣಿ ಯಾವುದೇ ಪರಮಾಣು ಸಿಡಿತಲೆ ಹೊತ್ತಿರಲಿಲ್ಲ ಎಂದು ಹೇಳಲಾಗಿದೆ.

RS-26 ಅನ್ನು ಮೊದಲ ಬಾರಿಗೆ 2012 ರಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಸೆಂಟರ್ ಫಾರ್ ಸ್ಟ್ರಾಟೆಜಿಕ್ ಮತ್ತು ಇಂಟರ್ನ್ಯಾಷನಲ್ ಸ್ಟಡೀಸ್ (CSIS) ಪ್ರಕಾರ 36 ಟನ್ ತೂಕದೊಂದಿಗೆ 12 ಮೀಟರ್ ಉದ್ದವಿದೆ ಎಂದು ಅಂದಾಜಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next