Advertisement

Hollywood films: ಇಂಡಿಯನ್‌ ಬಾಕ್ಸ್‌ ಆಫೀಸ್‌ನಲ್ಲಿ ಹಾಲಿವುಡ್‌ ಸಿನಿಮಾಗಳದ್ದೇ ದರ್ಬಾರ್

12:12 PM Jul 24, 2023 | Team Udayavani |

ಮುಂಬಯಿ: ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ಸದ್ಯ ಹಾಲಿವುಡ್‌ ಸಿನಿಮಾಗಳದ್ದೇ ಕಾರುಬಾರು. ಕಳೆದ ವಾರ ಹಾಲಿವುಡ್‌ ನಲ್ಲಿ ʼʼಓಪೆನ್‌ ಹೈಮರ್‌ʼʼ ಹಾಗೂ “ಬಾರ್ಬಿ” ಸಿನಿಮಾಗಳು ರಿಲೀಸ್‌ ಆಗಿದೆ. ಇಂಡಿಯನ್‌ ಮಾರ್ಕೆಟ್‌ ನಲ್ಲಿ ಈ ಎರಡೂ ಸಿನಿಮಾಗಳು ಮೊದಲ ವಾರವೇ ಭರ್ಜರಿ ಕಲೆಕ್ಷನ್‌ ಮಾಡಿದೆ.

Advertisement

ಓಪೆನ್ ಹೈಮರ್:

ಕ್ರಿಸ್ಟೋಫರ್ ನೋಲನ್ ಅವರ ಸಿನಿಮಾಗಳಿಗೆ ಭಾರತದಲ್ಲಿ ಪ್ರತ್ಯೇಕ ಪ್ರೇಕ್ಷಕ ವರ್ಗವೇ ಇದೆ. ಅಣುಬಾಂಬ್‌ ಸಂಶೋಧಿಸಿರುವ ಪರಮಾಣು ವಿಜ್ಞಾನಿ “ಓಪೆನ್ ಹೈಮರ್” ಅವರ ಕಥೆಯನ್ನೊಳಗೊಂಡಿರುವ ಸಿನಿಮಾ ವರ್ಲ್ಡ್‌ ವೈಡ್‌ ಭರ್ಜರಿ ಕಲೆಕ್ಷನ್‌ ಮಾಡಿದೆ. ಇದರೊಂದಿಗೆ ಭಾರತದಲ್ಲಿಯೂ ಈ ಸಿನಿಮಾ ಕೋಟಿ ಕಮಾಯಿ ಮಾಡಿದೆ. ಮೂರೇ ದಿನದಲ್ಲಿ ಸಿನಿಮಾ 48 ಕೋಟಿ ರೂ.ಕಲೆಕ್ಷನ್‌ ಮಾಡಿದೆ. ಮೊದಲ ದಿನ 14 ಕೋಟಿ ರೂ.ಗಳಿಸಿದೆ. ಶನಿವಾರ ಹಾಗೂ ಭಾನುವಾರ ಎರಡೂ ದಿನವೂ ತಲಾ 17 ಕೋಟಿ ರೂ.ಯನ್ನು ಕಲೆಕ್ಷನ್‌ ಮಾಡಿದೆ.

ಓಪನ್‌ಹೈಮರ್ ಬಾಕ್ಸ್ ಆಫೀಸ್ ಕಲೆಕ್ಷನ್:‌

ಶುಕ್ರವಾರ: 14.00 ಕೋಟಿ

Advertisement

ಶನಿವಾರ: 17.00 ಕೋಟಿ

ಭಾನುವಾರ: 17.25 ಕೋಟಿ

ಒಟ್ಟು: 48.25 ಕೋಟಿ ರೂ

ಬಾರ್ಬಿ: ಹಾಲಿವುಡ್‌ ನಲ್ಲಿ ಕಳೆದ ವಾರ ಬಿಡುಗಡೆಯಾದ ಸಿನಿಮಾದಲ್ಲಿ ಮಾರ್ಗಾಟ್ ರಾಬಿ ಮತ್ತು ರಯಾನ್ ಗೊಸ್ಲಿಂಗ್ ಅಭಿನಯದ “ಬಾರ್ಬಿ” ಸಿನಿಮಾವೂ ಒಂದು. ಬಾಕ್ಸ್‌ ಆಫೀಸ್‌ ನಲ್ಲಿ “ಓಪನ್‌ ಹೈಮರ್”‌ ಚಿತ್ರದೊಂದಿಗೆ ತೆರೆಕಂಡು ಪೈಪೋಟಿ ಕೊಟ್ಟ “ಬಾರ್ಬಿ” ಭಾರತದ ಬಾಕ್ಸ್‌ ಆಫೀಸ್‌ ನಲ್ಲಿಯೂ ಕಲೆಕ್ಷನ್‌ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಮೊದಲ ವೀಕೆಂಡ್‌ ನಲ್ಲಿ ಬಾರ್ಬಿ 18.25 ಕೋಟಿ ರೂ.ಕಲೆಕ್ಷನ್‌ ಮಾಡಿದೆ.

ಬಾರ್ಬಿ ಡೇ ವೈಸ್ ಬಾಕ್ಸ್ ಆಫೀಸ್ ಕಲೆಕ್ಷನ್:

‌ಶುಕ್ರವಾರ: 4.50 ಕೋಟಿ

ಶನಿವಾರ: 6.50 ಕೋಟಿ

ಭಾನುವಾರ: 7.25 ಕೋಟಿ

ಒಟ್ಟು: 18.25 ಕೋಟಿ  

ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ಬಾರ್ಬಿ 40 ಕೋಟಿ ರೂ.ಗಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಮಿಷನ್ ಇಂಪಾಸಿಬಲ್ 7:  ಇನ್ನು ಹಾಲಿವುಡ್‌ ಇತ್ತೀಚೆಗೆ ತೆರೆಕಂಡ ಬಿಗೆಸ್ಟ್‌ ಸಿನಿಮಾವೆಂದರೆ ಅದು ಟಾಮ್ ಕ್ರೂಸ್ ಅವರ “ಮಿಷನ್ ಇಂಪಾಸಿಬಲ್ 7”. ಮೊದಲ ಮೂರು ದಿನ 12.25 ಕೋಟಿ ರೂ.ಗಳಿಸಿದ ಬಳಿಕ ಇದೀಗ ಸಿನಿಮಾ ಒಟ್ಟು 92.50 ಕೋಟಿ ರೂ.ಕಲೆಕ್ಷನ್‌ ಮಾಡಿ ಮುಂದುವರಿದಿದೆ.

ಮಿಷನ್ ಇಂಪಾಸಿಬಲ್ 7 ಬಾಕ್ಸ್‌ ಆಫೀಸ್‌ ಕಲೆಕ್ಷನ್:

‌ಮೊದಲ ವಾರ: 80.25 ಕೋಟಿ

2ನೇ ಶುಕ್ರವಾರ: 2.50 ಕೋಟಿ

2ನೇ ಶನಿವಾರ: 4.75 ಕೋಟಿ

2ನೇ ಭಾನುವಾರ: 5.00 ಕೋಟಿ

ಒಟ್ಟು: 92.50 ಕೋಟಿ

ಹಾಲಿವುಡ್‌ ನ ಸತತ ಮೂರು ಸಿನಿಮಾಗಳು ಇಂಡಿಯನ್‌ ಮಾರ್ಕೆಟ್‌ ನಲ್ಲಿ ಬಾಕ್ಸ್‌ ಆಫೀಸ್‌ ನಲ್ಲಿ ಈ ರೀತಿಯ ಕಲೆಕ್ಷನ್‌ ಮಾಡಿರುವುದು ಬಲು ಅಪರೂಪ.

Advertisement

Udayavani is now on Telegram. Click here to join our channel and stay updated with the latest news.

Next