ಹೊಸದಿಲ್ಲಿ : ಅತ್ತ ಲಂಡನ್‌ನಲ್ಲಿ ನಿನ್ನೆ ಭಾನುವಾರ ಭಾರತೀಯ ಕ್ರಿಕೆಟ್ ತಂಡ ಚಾಂಪ್ಯನ್ಸ್‌ಟ್ರೋಫಿ ಕ್ರಿಕೆಟ್‌ನ ಫೈನಲ್ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಹಾಗೂ ಕಟ್ಟಾ ಎದುರಾಳಿ ಪಾಕಿಸ್ಥಾನದ ಎದುರು ಮಂಡಿಯೂರಿ ಶರಣಾದ ರೀತಿಯಲ್ಲಿ ಹೀನಾಯ ಸೋಲನ್ನು ಅನುಭವಿಸಿತ್ತಾದರೆ ಇತ್ತ ಹೊಸದಿಲ್ಲಿಯಲ್ಲಿ ಭಾರತೀಯ ಹಾಕಿ ತಂಡ ಹಾಕಿ ಅತ್ಯಂತ ರೋಷಾವೇಶದೊಂದಿಗೆ ವಿಶ್ವ ಲೀಗ್‌ನ ಕ್ಟಾರ್ಟರ್ ಫೈನಲ್ ಪಂದ್ಯದಲ್ಲಿ ಪಾಕಿಸ್ಥಾನವನ್ನು 7-1 ಗೋಲುಗಳ ಭರ್ಜರಿ ಅಂತರದಲ್ಲಿ ಮಣಿಸಿ ದೇಶಾಭಿಮಾನವನ್ನು ಪ್ರಕಟಿಸಿತು.
ಅಂದ ಹಾಗೆ ಭಾರತೀಯ ಹಾಕಿ ತಂಡ ಪಾಕ್ ತಂಡವನ್ನು ಮಣಿಸಿದುದಕ್ಕಿಂತಲೂ ಮಿಗಿಲಾಗಿ ಭಾರತೀಯ ಹಾಕಿ ತಂಡದ ಎಲ್ಲ ಸದಸ್ಯರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡದು ಆಡುವ ಮೂಲಕ ದೇಶಾಭಿಮಾನವನ್ನು ಮೆರೆದಿರುವುದು ಗಮನಾರ್ಹವಾಗಿದೆ.
ಪಾಕಿಸ್ಥಾನ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸುತ್ತಿರುವುದನ್ನು ಪ್ರತಿಭಟಿಸಲು ಭಾರತೀಯ ಹಾಕಿ ತಂಡದ ಸದಸ್ಯರು ಪಾಕ್ ವಿರುದ್ದದ ರೋಷಾವೇಶದ ಪಂದ್ಯದಲ್ಲಿ ತೋಳಿಗೆ ಕಪ್ಪುಪಟ್ಟಿ ಬಿಗಿದುಕೊಂಡು ಆಡಿದರು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.
ಕ್ರೀಡೆಯಲ್ಲಿ ಸೋಲು ಗೆಲವು ಸಹಜ ಮತ್ತು ಸಾಮಾನ್ಯ; ಆದರೆ ಎದುರಾಳಿ ದೇಶ ಅನ್ಯ ವಿಚಾರಗಳಲ್ಲಿ ಶತ್ರುತ್ವ ತೋರುವಾಗ ಅದನ್ನು ಪ್ರತಿಭಟಿಸದೇ ಇರಲು ಮತ್ತು ಆ ಮೂಲಕ ಎದುರಾಳಿ ಶತ್ರು ದೇಶಕ್ಕೆ ಪ್ರತಿಭಟನೆಯ ಸ್ಪಷ್ಟ ಸಂದೇಶ ಕಳುಹಿಸದೇ ಇರಲು ಹೇಗೆ ಸಾಧ್ಯ ಎಂಬುದೇ ಭಾರತೀಯ ಹಾಕಿ ತಂಡದ ನಿಲುವಾಗಿತ್ತು.
ಪಾಕ್ ಎದುರಿನ ಈ ನಿರ್ಣಾಯಕ ಕ್ವಾರ್ಟರ್ ಫೈನಲ್ ಪಂದ್ಯವನ್ನು ಜಯಿಸುವಲ್ಲಿ ಭಾರತೀಯ ಹಾಕಿ ತಂಡದ ಸದಸ್ಯರು ತೋರಿದ ರೋಷಾವೇಶ ಅನನ್ಯವಾಗಿತ್ತು; ಕ್ರೀಡೆಗೂ ಮೀರಿದುದಾಗಿತ್ತು ಎಂದು ವಿಶ್ಲೇಷಕರು ಹೇಳಿದ್ದಾರೆ. ಆದರೆ ಅದೇ ಬಗೆಯ ರೋಷಾವೇಶ ಭಾರತೀಯ ಕ್ರಿಕೆಟ್ ತಂಡದ ಸದಸ್ಯರಲ್ಲಿ ನಿನ್ನೆಯ ಫೈನಲ್ ಪಂದ್ಯದಲ್ಲಿ ಪಾಕ್ ಎದುರು ಕಂಡುಬರದಿದ್ದುದು ಗಮನಾರ್ಹವೂ ವಿಷಾದಕರವೂ ಆಗಿತ್ತು ಎನ್ನುತ್ತಾರೆ ಅದೇ ವಿಶ್ಲೇಷಕರು.
ಕಪ್ತಾನ ಪಿ ಆರ್ ಶ್ರೀಜೇಶ್ ಅನುಪಸ್ಥಿತಿಯಲ್ಲಿ ಭಾರತೀಯ ಹಾಕಿ ತಂಡವನ್ನು ಮುನ್ನಡೆಸಿದ್ದ ಹರ್‌ಮನ್‌ಪೀತ್ ಸಿಂಗ್ ಅವರು, “ಎದುರಾಳಿ ಪಾಕಿಸ್ಥಾನಕ್ಕೆ ನಾವು ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೈನಿಕರ ಮೇಲೆ ಅದು ನಡೆಸುತ್ತಿರುವ ದಾಳಿಯನ್ನು ಖಂಡಿಸುತೇವೆ ಎಂಬ ಸ್ಪಷ್ಟ ಸಂದೇಶವನ್ನು ಆ ದೇಶಕ್ಕೆ ರವಾನಿಸುವುದೇ ನಮ್ಮ ಉದ್ದೇಶವಾಗಿತ್ತು; ಅದಕ್ಕಾಗಿ ನಾವು ನಮ್ಮ ತೋಳಿಗೆ ಕಪ್ಪುಪಟ್ಟಿಕೊಂಡೇ ಆಡಿದೆವು’ ಎಂದು ಹೇಳಿದ್ದಾರೆ.