ವಿರುದಟಛಿ 1-1 ಗೋಲುಗಳಿಂದ ಡ್ರಾ ಸಾಧಿಸಿದೆ.
Advertisement
ಶುಕ್ರವಾರ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನ ಹಣಾಹಣಿ ನಡೆಸಿದವು. ಭಾರತ ಆರಂಭದಲ್ಲೇ ಗೋಲು ದಾಖಲಿಸಿ ಗರ್ಜಿಸಿತು. ತಂಡಕ್ಕೆ 20ನೇ ನಿಮಿಷದಲ್ಲಿ ಮನ್‌ದೀಪ್ ಗೋಲು ಬಾರಿಸುವ ಮೂಲಕ ಭಾರತ 1-1 ಮುನ್ನಡೆ ಸಾಧಿಸಿತು. ಆದರೆ ಆಸ್ಟ್ರೇಲಿಯಾ ವೇಗವಾಗಿ ಆಡುವ ಮೂಲಕ ಭಾರತಕ್ಕೆ ಪ್ರತ್ಯುತ್ತರ ನೀಡಿತು. 21ನೇ ನಿಮಿಷದಲ್ಲಿ ಜೆರ್ಮಿ ಪೆನಾಲ್ಟಿ ಅವಕಾಶದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗೋಲು ತಂದುಕೊಟ್ಟರು. ಹೀಗಾಗಿ ಎರಡು ತಂಡಗಳ ನಡುವಿನ 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯಗೊಂಡಿತು. ಸರ್ದಾರ್ ಸಿಂಗ್ ಅನುಪಸ್ಥಿತಿಯಲ್ಲಿ ಭಾರತಕ್ಕೆ ಎದುರಾಳಿಯಿಂದ ದೊಡ್ಡ ಸವಾಲು ಎದುರಾಯಿತು. ಯುವಕರ ತಂಡ ಅನುಭವದ ಕೊರತೆಯನ್ನೂ ಅನುಭವಿಸಿತು.
ಕೈತಪ್ಪಿಸಿಕೊಂಡಿತು. ಆಸ್ಟ್ರೇಲಿಯಾ ಆಟಗಾರರು ಭಾರತೀಯರ ಪ್ರಯತ್ನಕ್ಕೆ ತಣ್ಣೀರು ಎರಚಿದರು. ಆದರೆ ಭಾರತವೂ ಆಸೀಸ್‌ಗೆ ಇದೇ ರೀತಿಯಲ್ಲಿ ತಿರುಗೇಟು ನೀಡಿತು. ಆಸೀಸ್‌ನ ಹಲವು ಪ್ರಯತ್ನವನ್ನು ಭಗ್ನಗೊಳಿಸಿತು. ಕೊನೆಯವರೆಗೂ ಎರಡು ತಂಡಗಳ ನಡುವೆ ಇದೇ ರೀತಿಯಲ್ಲಿ ರೋಚಕ ಹೋರಾಟ ನಡೆಯಿತು. ಆದರೆ ಯಾರಿಗೂ ಗೋಲು ಒಲಿಯಲಿಲ್ಲ. ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿತು. ಶನಿವಾರ ಗುಂಪಿನ 2ನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಡಿಸೆಂಬರ್ 4ರಂದು ಭಾರತ ತಂಡವು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ. ಬಳಿಕ ಕ್ವಾರ್ಟರ್‌ಫೈನಲ್ ಪಂದ್ಯಗಳು ಆರಂಭವಾಗಲಿದೆ.