Advertisement

ಫ‌ುಟ್‌ಬಾಲ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ಹಾಕಿ ಕೋಚ್‌!

12:30 AM Mar 02, 2019 | |

ಹೊಸದಿಲ್ಲಿ: ಭಾರತದ ಮಾಜಿ ಹಾಕಿ ಕೋಚ್‌ ಹರೇಂದ್ರ ಸಿಂಗ್‌ ಅವರೀಗ ಫ‌ುಟ್‌ಬಾಲ್‌ ಕೋಚ್‌ ಆಗಿ ಬದಲಾಗುವರೇ? ಇಂಥದೊಂದು ಕುತೂಹಲ ದೇಶದ ಕ್ರೀಡಾಭಿಮಾನಿಗಳನ್ನು ಕಾಡಲಾರಂಭಿಸಿದೆ. ಇದಕ್ಕೆ ಕಾರಣ, ಅವರು ಆಲ್‌ ಇಂಡಿಯಾ ಫ‌ುಟ್‌ಬಾಲ್‌ ಫೆಡರೇಶನ್‌ (ಎಐಎಫ್ಎಫ್) “ಡಿ’ ದರ್ಜೆಯ  ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿರುವುದು!

Advertisement

ಈ ಕುರಿತು ಪ್ರತಿಕ್ರಿಯಿಸಿದ ಹರೇಂದ್ರ ಸಿಂಗ್‌, “ನನ್ನ ಮೊದಲ ಆದ್ಯತೆ ಯಾವತ್ತೂ ಹಾಕಿಗೆ. ಹಾಕಿಯನ್ನು ನಾನು ಯಾವತ್ತೂ ಕಡೆಗಣಿಸುವುದಿಲ್ಲ. ಫ‌ುಟ್‌ಬಾಲ್‌ ನನ್ನ ನೆಚ್ಚಿನ ಕ್ರೀಡೆಯಾದುದರಿಂದ ಇದಕ್ಕೆ ನಾನು ಅರ್ಜಿ ಸಲ್ಲಿಸಿದ್ದೇನೆ, ಅಷ್ಟೇ…’ ಎಂದಿದ್ದಾರೆ. ಈ ನಡುವೆ ಯುರೋಪ್‌ ಸೇರಿದಂತೆ 2 ದೇಶಗಳಿಂದ ತನಗೆ ಹಾಕಿ ಕೋಚಿಂಗ್‌ ಅವಕಾಶ ಬಂದಿತ್ತು ಎಂಬುದಾಗಿಯೂ ಅವರು ಹೇಳಿದರು. 

ತವರಲ್ಲೇ ನಡೆದ ಕಳೆದ ಹಾಕಿ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತ ಕಪ್‌ ಎತ್ತಲು ವಿಫ‌ಲವಾದ ಕಾರಣ ಹರೇಂದ್ರ ಸಿಂಗ್‌ ಅವರನ್ನು ಮುಖ್ಯ ಕೋಚ್‌ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ನೂತನ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವೂ ಗುರುವಾರಕ್ಕೆ ಮುಗಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next