Advertisement
ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಗ್ರ ಸಂಘಟನೆಯ ಕಮಾಂಡರ್ ಯಾಸೀನ್ ಇಟೂ ಅಲಿಯಾಸ್ ಗಜ್ನವಿ ಕೂಡ ಹತನಾಗಿದ್ದು, ಇದು ಹಿಜ್ಬುಲ್ ಮುಜಾಹಿದೀನ್‌ಗೆ ಅತಿದೊಡ್ಡ ಹಿನ್ನಡೆ ಎಂದು ಬಣ್ಣಿಸಲಾಗಿದೆ. ಅವ್ನಿರಾ ಎಂಬ ಗ್ರಾಮದಲ್ಲಿ ಉಗ್ರರು ಅವಿತಿರುವ ಬಗ್ಗೆ ಸ್ಥಳೀಯ ಪೊಲೀಸರು ನೀಡಿದ ಸುಳಿವಿನ ಮೇರೆಗೆ, ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಮತ್ತು ಸೇನೆ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿತು. ಈ ವೇಳೆ, ಎರಡೂ ಕಡೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಯೋಧರು ಹುತಾತ್ಮರಾಗಿ, ಐವರು ಗಾಯಗೊಂಡಿದ್ದರು. ರಾತ್ರಿಯಿಡೀ ಕಾರ್ಯಾಚರಣೆ ಮುಂದುವರಿದು, ಬೆಳಗ್ಗಿನ ವೇಳೆಗೆ ಉಗ್ರ ಯಾಸೀನ್ ಸೇರಿದಂತೆ ಮೂವರನ್ನು ಹತ್ಯೆ ಮಾಡುವ ಮೂಲಕ ಸೇನೆಯು ಕಾರ್ಯಾಚರಣೆ ಸ್ಥಗಿತಗೊಳಿಸಿತು.
ಇದೇ ವೇಳೆ, ರವಿವಾರ ಒಂದೇ ದಿನ ಪಾಕ್ ಪಡೆಗಳು ಪೂಂಛ…, ರಜೌರಿ ಮತ್ತು ಬಾರಾಮುಲ್ಲಾ ಜಿಲ್ಲೆಯ ಎಲ್‌ಒಸಿಯಲ್ಲಿ 4 ಬಾರಿ ಕದನ ವಿರಾಮ ಉಲ್ಲಂ ಸಿದೆ. ಗುಂಡಿನ ದಾಳಿಯಿಂದ ಮೂವರು ಯೋಧರು ಗಾಯಗೊಂಡಿದ್ದಾರೆ.
Related Articles
Advertisement
ಉಗ್ರರಿಗೆಲ್ಲ ಪ್ರಾಣಭೀತಿ ಶುರುವಾಗಿದೆ. ಇವರ ನಿರ್ಮೂಲನೆಗೆ ಸತತ ಪರಿಶ್ರಮ ಪಡುತ್ತಿರುವ ಜಮ್ಮು-ಕಾಶ್ಮೀರ ಪೊಲೀ ಸರನ್ನು ನಾನು ಅಭಿನಂದಿಸುತ್ತೇನೆ ಎಂದೂ ಹೇಳಿದ್ದಾರೆ ಜೇಟ್ಲಿ. ಜತೆಗೆ, ಕಣಿವೆ ರಾಜ್ಯವನ್ನು ಸಶಸ್ತ್ರ ಉಗ್ರರಿಂದ ಮುಕ್ತಿಗೊಳಿಸು ವುದೇ ನಮ್ಮ ಸರಕಾರದ ಉದ್ದೇಶ ಎಂದೂ ಹೇಳಿದ್ದಾರೆ. ಇದೇ ವೇಳೆ, ಪಾಕ್ ವಿರುದ್ಧ ಹರಿಹಾಯ್ದ ಅವರು, “90ರ ದಶಕದ ನಂತರ ಪಾಕಿಸ್ಥಾನವು ತನ್ನ ಕಾರ್ಯತಂತ್ರ ಬದಲಿಸಿ, ಭಾರತದೊಳಗೆ ಉಗ್ರ ವಾದವನ್ನು ಪ್ರೇರೇಪಿಸ ತೊಡಗಿತು. ಆದರೆ, ಈಗ ಎಲ್‌ಒಸಿಯಲ್ಲಿ ನಮ್ಮ ಸೇನೆಯ ಅಸ್ತಿತ್ವ ಪ್ರಬಲ ವಾಗಿದ್ದು, ಪಾಕಿಸ್ಥಾನಕ್ಕೆ ಉಗ್ರರನ್ನು ಒಳನುಸುಳಿ ಸಲು ಸಾಧ್ಯವಾಗುತ್ತಿಲ್ಲ,’ ಎಂದಿದ್ದಾರೆ.
7 ತಿಂಗಳಲ್ಲಿ 70 ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಕಳೆದ 7 ತಿಂಗಳಲ್ಲಿ ಜಮ್ಮು-ಕಾಶ್ಮೀರದ ಸುಮಾರು 70 ಮಂದಿ ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪ್ರಸಕ್ತ ವರ್ಷ ದಕ್ಷಿಣ ಕಾಶ್ಮೀರದ ಮೂರು ಜಿಲ್ಲೆಗಳಲ್ಲಿ ಅಂದರೆ ಶೋಪಿಯಾನ್, ಪುಲ್ವಾಮಾ ಮತ್ತು ಕುಲ್ಗಾಂನಿಂದ ಅತ್ಯಧಿಕ ಯುವಕರನ್ನು ಉಗ್ರರು ಸೆಳೆದಿದ್ದಾರೆ. 2016ರಲ್ಲಿ ಒಟ್ಟಾರೆ 88 ಯುವಕರು ಉಗ್ರ ಸಂಘಟನೆಗೆ ಸೇರಿದ್ದರು. 2014ರಿಂದೀಚೆಗೆ ಸೇರ್ಪಡೆ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದಿದ್ದಾರೆ.