Advertisement

ಹಿರಿಯಡಕ –ಮೂಡುಬೆಳ್ಳೆ ಮಾರ್ಗದಲ್ಲಿ ಸರಕಾರಿ ಬಸ್‌ ಸಂಚರಿಸಲಿ

06:30 AM Mar 20, 2018 | Team Udayavani |

ಪಟ್ಲ: ಹಿರಿಯಡಕ ಮತ್ತು ಮೂಡುಬೆಳ್ಳೆಯ ನಡುವೆ ಬರುವ ಬೊಮ್ಮರಬೆಟ್ಟು, ಅಂಜಾರು, ಕುದಿ, ಪೆರ್ಣಂಕಿಲ, ಕಟ್ಟಿಂಗೇರಿ, ಮತ್ತು ಬೆಳ್ಳೆ ಈ ಐದು ಗ್ರಾಮಗಳನ್ನು ಸಂಪರ್ಕಿಸುವ ಜಿಲ್ಲಾ ಮುಖ್ಯರಸ್ತೆಯು ಸರ್ವಋತು ರಸ್ತೆಯಾಗಿ ಮಾರ್ಪಟ್ಟಿದ್ದು ವಾಹನ ಸಂಚಾರಕ್ಕೆ ತುಂಬಾ ಯೋಗ್ಯವಾಗಿದೆ.

Advertisement

ಈ ಗ್ರಾಮಗಳ‌ಲ್ಲಿ ವಾಸಿಸುವ ಜನರಿಗೆ ಹಿರಿಯಡಕ ಹಾಗೂ ಮೂಡುಬೆಳ್ಳೆಯಲ್ಲಿ ಪ್ರಥಮ ದರ್ಜೆ ಕಾಲೇಜು ಇರುವುದರಿಂದ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಹಕಾರಿಯಾಗಿದೆ. ಕೃಷಿಯನ್ನೇ ಪ್ರಧಾನವಾಗಿ ಅವಲಂಬಿಸಿರುವ ಈ ಭಾಗದ ಜನತೆ, ಹೈನುಗಾರಿಕೆ, ಕೂಲಿ, ಇತ್ಯಾದಿಗಳಿಂದ ತಮ್ಮ ಜೀವನ ನಡೆಸುತ್ತಿದ್ದಾರೆ. ಆದರೆ ಈ ಭಾಗದಲ್ಲಿ ಸೂಕ್ತವಾದ ಬಸ್‌ ಸೇವೆ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳಾದಿ ಎಲ್ಲರೂ ಸಂಚಾರ ಸಮಸ್ಯೆಯನ್ನು ಎದುರಸುತ್ತಿದ್ದಾರೆ.

ಈ ಭಾಗದಲ್ಲಿ ಸರಕಾರದ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಪೆರ್ಣಂಕಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ದಾದಿಯರು ಹಾಗೂ ಸಿಬಂದಿಗಳು ಪ್ರಾಮಾಣಿಕ ಹಾಗೂ ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ. ಆರೋಗ್ಯ ಕೇಂದ್ರ ಈ ಭಾಗದಲ್ಲಿ  ಮನೆಮಾತಾಗಿದೆ. ರಸ್ತೆಯ ಸಮೀಪದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ  ಸೂಕ್ತ ಬಸ್‌ ವ್ಯವಸ್ಥೆಯಿಲ್ಲದೆ ಚಿಕಿತ್ಸೆಗಾಗಿ ಬರುವ ರೋಗಿಗಳು ಪರದಾಡುವಂತಾಗಿದೆ. 

ಇದರಿಂದಾಗಿ ಜನರು ಸರಕಾರದ ವತಿಯಿಂದ ಉಚಿತವಾಗಿ ಕೊಡಲ್ಪಡುವ ಸೇವೆಗಳನ್ನು ಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗದೇ ಖಾಸಗೀ ವೈದ್ಯರ ಬಳಿ ಹೋಗಬೇಕಾಗಿದೆ. ಬಡ ರೈತಾಪಿ, ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಈ ಭಾಗದ ಜನರ ಸಮಸ್ಯೆಗಳನ್ನು ಈ ಪರಿಹರಿಸುವಂತೆ ಸಚಿವ ಪ್ರಮೋದ ಮಧ್ವರಾಜರಲ್ಲಿ ನಿವೇದಿಸಿಕೊಂಡಾಗ ಅವರು 48 ಗಂಟೆಯ ಒಳಗಾಗಿ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಗೆ ಸೂಕ್ತವಾಗಿ ಸ್ಪಂದಿಸುವಂತೆ ಪತ್ರ ಬರೆದಿದ್ದಾರೆ. ಸ್ಥಳೀಯ ಶಾಸಕ ವಿನಯ ಕುಮಾರ ಸೊರಕೆಯವರಿಗೂ ಈ ಸಮಸ್ಯೆಯನ್ನು ಬಗ್ಗೆ ಮನವಿ ಮಾಡಿಕೊಳ್ಳಲಾಗಿದೆ. ಉಡುಪಿ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ ಕೂಡ ಮನವಿಗೆ ಪೂರಕವಾಗಿ ಸ್ಪಂದಿಸಿ ಮಂಗಳೂರಿನ  ಕೆಎಸ್‌ಆರ್‌ಟಿಸಿ ಕಚೇರಿಗೆ ಪತ್ರ ಬರೆದಿದ್ದಾರೆ. 

ಮುಂದಿನ ಆರ್‌ಟಿಒ ಸಭೆಯಲ್ಲಿ ಹೊಸತಾಗಿ ಸರಕಾರಿ ಬಸ್‌ಗೆ ಪರ್ಮಿಟ್‌ ನೀಡಿ ಈ ಭಾಗದ ಜನರಿಗೆ ಅತಿ ಅಗತ್ಯವಾಗಿ ಬೇಕಾಗಿರುವ ಸರಕಾರಿ ಬಸ್‌ ಸೇವೆಯನ್ನು ನೀಡಿ ಸಹಕರಿಸಬೇಕು.
-ಅಣ್ಣಯ್ಯ ನಾಯಕ್‌ ಪಟ್ಲ, 
ಕಾರ್ಯದರ್ಶಿ, ರೂರಲ್‌ 
ಎಜುಕೇಶನ್‌ ಸೊಸೈಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next