Advertisement
ಶ್ರೀ ಕ್ಷೇತ್ರದಲ್ಲಿ ಎ. 16 ರಿಂದ ಎ. 25 ರವರೆಗೆ ನವೀಕೃತ ದೇವಾ, ದೇಗುಲ ಸಮರ್ಪಣೆ, ಪುನಃ ಪ್ರತಿಷ್ಠಾದಿ ಕಾರ್ಯಕ್ರಮಗಳು ಹಾಗೂ ಬ್ರಹ್ಮಕಲಶೋತ್ಸವವು ಲಕ್ಷಾಂತರ ಭಕ್ತಾದಿಗಳ ಉಪಸ್ಥಿತಿಯೊಂದಿಗೆ ಅರ್ಥಪೂರ್ಣವಾಗಿ ನಡೆಯಿತು.
Related Articles
Advertisement
ಉತ್ಸವ ಸಂದರ್ಭ ಸುಮಾರು ಲಕ್ಷಕ್ಕೂ ಅಧಿಕ ಮಂದಿಗೆ ಅನ್ನದಾನ ಮತ್ತು ಉಪಾಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ನಿತ್ಯ ಮಧ್ಯಾಹ್ನ 20 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಕೊನೆಯ ದಿನ 60 ಸಾವಿರಕ್ಕೂ ಹೆಚ್ಚು ಮಂದಿ ಅನ್ನದಾನ ಸ್ವೀಕರಿಸಿದ್ದರು. ಸುಮಾರು ಹತ್ತು ಸಾವಿರ ಜನರು ಏಕಕಾಲದಲ್ಲಿ ಊಟಕ್ಕೆ ವ್ಯವಸ್ಥೆಯನ್ನು ಮಾಡಲಾಗಿತ್ತು. 100 ಕ್ಕೂ ಹೆಚ್ಚು ಬಾಣಸಿಗರು ಶ್ರಮಿಸಿದ್ದರು.
ಶಿಲ್ಪ ಕಲೆಯ ಸುಂದರ ದೇಗುಲ ಇಡೀ ದೇಗುಲವನ್ನು ಕಲ್ಲು ಮತ್ತು ಮರಗಳಿಂದ ಮರು ರೂಪಿಸಲಾಗಿದ್ದು ಅತ್ಯಾಕರ್ಷಕ ಕೆತ್ತನೆಗಳಿಂದ ಸುಂದರ ಗೊಳಿಸಲಾಗಿದೆ. ಬ್ರಹ್ಮಲಿಂಗೇಶ್ವರ ಗುಡಿ, ವೀರಭದ್ರ ಗರ್ಭಗುಡಿ, ಮುಖ ಮಂಟಪ, ರಾಜಗೋಪುರಗಳು, ಹೊಯ್ಸಳ, ದ್ರಾವಿಡ ಶೈಲಿಗಳಲ್ಲಿ ನಿರ್ಮಿಸಲಾಗಿದೆ. ದೀಪದಳಿಯಲ್ಲಿ ಶಿವನ ನಾಟ್ಯಭಂಗಿಯಿದ್ದು ದೀಪ ದಳಿಯ ಮೇಲಿನ ಹಂತದಲ್ಲಿ ಹಿರಿಯಡಕ ಕ್ಷೇತ್ರದ ಇತಿಹಾಸವನ್ನು, ಕಥೆಯನ್ನು, ಉತ್ಸವ ಮತ್ತು ಸಿರಿಜಾತ್ರೆಯ ದೃಶ್ಯಗಳನ್ನು ಮರದ ಹಲಗೆಗಳಲ್ಲಿ ಉಬ್ಬುಶಿಲ್ಪವಾಗಿ ಕೆತ್ತಿಸಲಾಗಿದೆ. ಗರ್ಭಗುಡಿಯ ದೀಪ ದಳಿಗೆ 460 ಕೆಜಿ ಬೆಳ್ಳಿ ಹೊದಿಕೆಯನ್ನು ಹಾಕಲಾಗಿದೆ. ಎÇÉಾ ಕೆಲಸಗಳಿಗೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಶಿಲ್ಪಿಗಳೂ ಕೆಲಸ ಮಾಡಿದ್ದು ಶ್ಲಾಘನೀಯವಾಗಿದೆ. 83 ಅಡಿ ಉದ್ದದ ಧ್ವಜ ಸ್ತಂಭ
ಹಿರಿಯಡಕ ಶ್ರೀ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಸಂದರ್ಭದಲ್ಲಿ ಕರಾವಳಿಯÇÉೇ ಅತೀ ಎತ್ತರದ 83 ಅಡಿ ಉದ್ದದ ಧ್ವಜ ಸ್ತಂಭವನ್ನು ಪ್ರತಿಷ್ಠಾಪಿಸಿ ಕಲಶಾಭಿಷೇಕ ನಡೆಸಲಾಯಿತು. ದೇವಳದ ತಂತ್ರಿವರ್ಯರಾದ ಲಕ್ಷ್ಮೀನಾರಾಯಣ ತಂತ್ರಿ, ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಹಾಗೂ ಮಹಾರುದ್ರಯಾಗವನ್ನು ನಡೆ ಸಲಾಯಿತು. ಈ ಮಹಾಉತ್ಸವದಲ್ಲಿ ಮುಂಬಯಿ ಪುಣೆಯ ನೂರಾರು ಸಂಖ್ಯೆಯ ದಾನಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.
ಚರಿಶ್ಮಾ ಬಿಲ್ಡರ್ಸ್ ಮುಂಬಯಿಯ ಸುಧೀರ್ ಶೆಟ್ಟಿ, ಕೃಷ್ಣಾ ಶೆಟ್ಟಿ ಮುಂಬಯಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಅಂಜಾರು ಬೀಡು ಸುಭಾಶ್ಚಂದ್ರ ಹೆಗ್ಡೆ, ಪಡªಮಬೀಡು ಹರ್ಷವರ್ಧನ ಹೆಗ್ಡೆ, ಕಾರ್ಯಾಧ್ಯಕ್ಷ ಗೋವರ್ಧನ ಹೆಗ್ಡೆ, ಕಾರ್ಯದರ್ಶಿ ಅಮರನಾಥ ಶೆಟ್ಟಿ, ಕೋಶಾಧಿಕಾರಿ ಕೃಷ್ಣಮೂರ್ತಿ, ಜೀರ್ಣೋದ್ಧಾರ ಮುಂಬಯಿ ಸಮಿತಿಯ ಅಧ್ಯಕ್ಷರಾದ ಎನ್. ಬಿ. ಶೆಟ್ಟಿ ಹಿರಿಯಡ್ಕ, ಪುಣೆ ಸಮಿತಿಯ ಅಧ್ಯಕ್ಷ ಅಂಜಾರುಬೀಡು ಹರಿಪ್ರಸಾದ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ, ಮುಂಬಯಿ ಬಂಟರ ಸಂಘದ ವಿಶ್ವಸ್ತರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಅಂಜಾರುಬೀಡು ಶಿವರಾಜ್ ಹೆಗ್ಡೆ ಪುಣೆ, ಪ್ರಸಾದ್ ಶೆಟ್ಟಿ ಪುಣೆ, ಪುಣೆಯ ಡಾ| ಬಾಲಾಜಿತ್ ಶೆಟ್ಟಿ, ಮುಂಬಯಿ ಸಮಿತಿಯ ಹಿರಿಯಡ್ಕ ಮೋಹನ್ ದಾಸ್, ಮುಂಬಯಿಯ ಅರುಣಾಚಲ ಶೆಟ್ಟಿ, ಸುಧೀರ್ ಹೆಗ್ಡೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಚಿತ್ರ-ವರದಿ: ಕಿರಣ್ ಬಿ. ಕರ್ನೂರು