ಶಿಮ್ಲಾ: ಇದುವರೆಗೆ ಕಾಂಗ್ರೆಸ್‌ನ ಅಗ್ರಗಣ್ಯ ನಾಯಕರ್ಯಾರೂ ಅಯೋಧ್ಯೆ ಶ್ರೀರಾಮ ಮಂದಿರದ ಉದ್ಘಾಟನೆಗೆ ಹೋಗುವುದಾಗಿ ಘೋಷಿಸಿಲ್ಲ. ಆದರೆ ಉತ್ತರಪ್ರದೇಶ ಮತ್ತು ಹಿಮಾಚಲಪ್ರದೇಶದ ಕಾಂಗ್ರೆಸ್ ನಾಯಕರು ಮಾತ್ರ ಕಾರ್ಯಕ್ರಮಕ್ಕೆ ಹೋಗುವುದಾಗಿ ಸ್ಪಷ್ಟವಾಗಿ ಹೇಳಿ ದ್ದಾರೆ. ಹಿಮಾಚಲದ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಪುತ್ರ, ಲೋಕೋಪ ಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಜ.22ರ ಉದ್ಘಾಟನೆ (ಪ್ರಾಣಪ್ರತಿಷ್ಠಾಪನೆ)ಗೆ ಹೋಗುವುದಾಗಿ ಖಚಿತಪಡಿಸಿದ್ದಾರೆ.
“ಇದು ರಾಜಕೀಯ ವಿಷಯವಲ್ಲ. ಹಿಮಾ ಚಲ ಪ್ರದೇಶದಿಂದ ಆಹ್ವಾನ ಪಡೆದಿರುವ ಕೆಲವೇ ಅದೃಷ್ಟವಂತರಲ್ಲಿ ನಾನೂ ಒಬ್ಬ ಎಂಬ ಸಂತೋಷ ನನಗಿದೆ. ಇಂಥ ಗೌರವ ನೀಡಿದ ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಪರಿ
ಷತ್‌ಗೆ ಧನ್ಯವಾದ’ ಎಂದು ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.
ಜ. 15ಕ್ಕೆ ಉ.ಪ್ರ. ಕೈ ನಾಯಕರ ಭೇಟಿ
ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಅವಿನಾಶ್ ಪಾಂಡೆ, ಅಲ್ಲಿನ ರಾಜ್ಯ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷ ಅಜಯ್ ರೈ, ತಾವು ಜ.15ರ ಮಕರ ಸಂಕ್ರಾಂತಿಯಂದು ರಾಮಮಂದಿರಕ್ಕೆ ಹೋಗುವುದಾಗಿ ತಿಳಿಸಿದ್ದಾರೆ. ತಮ್ಮೊಂದಿಗೆ ರಾಜ್ಯದ 100 ನಾಯಕರು ಇರಲಿದ್ದಾರೆ ಎಂದೂ ಸ್ಪಷ್ಟಪಡಿಸಿದ್ದಾರೆ.
ರಾಮ ಮಂದಿರ ನಿರ್ಮಾಣ ಹೆಗ್ಗಳಿಕೆ ಮಸೀದಿ ಧ್ವಂಸಗೊಳಿಸಿದ ಕರಸೇವಕರಿಗೆ ಇರಲಿ: ಉಮಾ
ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಧ್ವಂಸ ಮಾಡಿದ ಕಾರಣದಿಂದಲೇ ಅಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಸಾಧ್ಯವಾಯಿತು. ಹೀಗಾಗಿ ಮಂದಿರ ನಿರ್ಮಾಣದ ಯಶಸ್ಸು ಮಸೀದಿ ಧ್ವಂಸ ಮಾಡಿದ ಕರಸೇವಕರಿಗೆ ಸೇರಬೇಕು ಎಂದು ಎಂದು ಮಧ್ಯಪ್ರದೇಶದ ಮಾಜಿ ಸಿಎಂ ಉಮಾ ಭಾರತಿ ಹೇಳಿದ್ದಾರೆ. ಅವರು ಮಸೀದಿಯನ್ನು ಒಡೆದು ಹಾಕದೆ ಇರುತ್ತಿದ್ದರೆ, ಭಾರತೀಯ ಪುರಾತತ್ತÌ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ರೀತಿಯ ಸಾಕ್ಷ್ಯಾಧಾರಗಳನ್ನು ಸಂಶೋಧಿಸಿ ಹೊರ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ ಎಂದರು.