Advertisement

ಭಾರತದ ಸ್ಟಾರ್‌ ಸ್ಪ್ರಿಂಟರ್‌ ಹಿಮಾ ದಾಸ್‌ ಇನ್ನು ಜಿಲ್ಲಾ ಉಪ ಪೊಲೀಸ್‌ ವರಿಷ್ಠಾಧಿಕಾರಿ

12:21 AM Feb 12, 2021 | Team Udayavani |

ಗುವಾಹಟಿ: ಭಾರತದ ಸ್ಟಾರ್‌ ಸ್ಪ್ರಿಂಟರ್‌ ಹಿಮಾ ದಾಸ್‌ ಅವರಿಗೆ ಅಸ್ಸಾಮ್‌ ಸರಕಾರ ಜಿಲ್ಲಾ ಉಪ ಪೊಲೀಸ್‌ ವರಿಷ್ಠಾಧಿಕಾರಿ (ಡಿಎಸ್‌ಪಿ) ಹುದ್ದೆಯನ್ನು ನೀಡಿ ಗೌರವಿಸಿದೆ. ಇದಕ್ಕಾಗಿ ಅವರು ರಾಜ್ಯದ ಮುಖ್ಯಮಂತ್ರಿ, ಕೇಂದ್ರದ ಮಾಜಿ ಕ್ರೀಡಾ ಸಚಿವ ಸರ್ಬಾನಂದ ಸೊನೋವಾಲ್‌ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

“ನನ್ನನ್ನು ಡೆಪ್ಯುಟಿ ಎಸ್‌ಪಿ ಹುದ್ದೆ ನೀಡಿದ ಗೌರವಾನ್ವಿತ ಮುಖ್ಯಮಂತ್ರಿ ಸರ್ಬಾನಂದ ಸೊನೋವಾಲ್‌ ಅವ ರಿಗೆ ಕೃತಜ್ಞತೆಗಳು. ನನ್ನ ಪಾಲಿಗೆ ಇದೊಂದು ಮಹಾನ್‌ ಗೌರವ ಹಾಗೂ ಪ್ರೇರಣೆ. ರಾಜ್ಯ ಹಾಗೂ ದೇಶಕ್ಕಾಗಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಮುಂದುವರಿಯಲಿದ್ದೇನೆ. ಜೈ ಹಿಂದ್‌’ ಎಂದು ಹಿಮಾ ದಾಸ್‌ ಟ್ವೀಟ್‌ ಮಾಡಿದ್ದಾರೆ.

ಅಸ್ಸಾಮ್‌ ಸರಕಾರದ ಈ ನಿರ್ಧಾ ರವನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಸ್ವಾಗತಿಸಿದ್ದಾರೆ. ಪೊಲೀಸ್‌ ವೃತ್ತಿಯ ಹೊರತಾಗಿಯೂ ಹಿಮಾ ದಾಸ್‌ ದೇಶಕ್ಕಾಗಿ ಓಡಲಿ ಎಂದಿದ್ದಾರೆ.

ಸದ್ಯ, “ಧಿಂಗ್‌ ಎಕ್ಸ್‌ಪ್ರೆಸ್‌’ ಖ್ಯಾತಿಯ 21 ವರ್ಷದ ಹಿಮಾ ದಾಸ್‌ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಪಡೆಯುವತ್ತ ಗುರಿ ನೆಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next