ನವದೆಹಲಿ : ಪ್ರಾಣಿಗಳ ತುಂಟಾಟ ನೋಡಲು ಎಷ್ಟು ಖುಷಿ ಆಗುತ್ತದೆ ಎಂದರೆ ನಮ್ಮ ಬೇಸರವನ್ನೂ ಕಳೆಯುವ ಶಕ್ತಿಯನ್ನು ಪ್ರಾಣಿಗಳು ಹೊಂದಿರುತ್ತವೆ. ಇನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದುಬರುವ ವೈರಲ್ ವಿಡಿಯೋಗಳಿಂದ ಕೂಡ ಮನಸ್ಸಿಗೆ ಮುದ ಸಿಗುತ್ತದೆ.
ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎರಡು ಕಾಂಗರು ಪ್ರಾಣಿಗಳು ಪರಸ್ಪರ ತಬ್ಬಿಕೊಂಡು ಜಗಳ ಆಡುತ್ತಿವೆ. ಈ ವಿಡಿಯೋವನ್ನು ನೋಡಿದರೆ ಎರಡೂ ಪ್ರಾಣಿಗಳು ತಬ್ಬಿಕೊಂಡಿವೆ ಎಂದು ಭಾಸವಾಗುತ್ತದೆ.
ಈ ಎರಡು ಕಾಂಗರು ಪ್ರಾಣಿಗಳು ಒಂದಕ್ಕೊಂದು ಒದೆಯುತ್ತ ಜಗಳ ಮಾಡಿಕೊಳ್ಳುವ ವೇಳೆ ಮತ್ತೊಂದು ಪ್ರಾಣಿ ಮಧ್ಯಪ್ರವೇಶ ಮಾಡಿ ಎರಡರ ಜಗಳವನ್ನು ನಿಲ್ಲಿಸುತ್ತದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಶೇರ್ ಮಾಡಲಾಗಿದೆ. ಆ ವಿಡಿಯೋ ನೋಡಿದ್ರೆ ಒಂದು ಕಾಂಗರು ಪ್ರಾಣಿ ಮತ್ತೊಂದಕ್ಕೆ ಮುತ್ತು ಕೊಟ್ಟ ರೀತಿ ಕಾಣಿಸುತ್ತದೆ.
Related Articles
ಈ ವಿಡಿಯೋವನ್ನು ನೇಚರ್ ಅಂಡ್ ಅನಿಮಲ್ಸ್ ಎಂಬ ಟ್ವಿಟ್ಟರ್ ಖಾತೆ ಶೇರ್ ಮಾಡಿದ್ದು, ಬರೋಬ್ಬರಿ 36000 ವ್ಯೂಸ್ ಪಡೆದಿದೆ. ಹಲವು ಮಂದಿ ವಿಡಿಯೋ ನೋಡಿ ಕಮೆಂಟ್ ಮಾಡುತ್ತ, ನಗುವ ಎಮೊಜಿಗಳನ್ನು ಕಳುಹಿಸಿದ್ದಾರೆ.