Advertisement

ಪ್ರಾದೇಶಿಕ ಪಕ್ಷಗಳಲ್ಲಿ DMKಗೆ ಹೆಚ್ಚಿನ ಆದಾಯ

11:36 PM May 16, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಇರುವ 27 ಪ್ರಾದೇಶಿಕ ಪಕ್ಷಗಳಿಗೆ 2021-22ನೇ ಸಾಲಿನಲ್ಲಿ 1,165 ಕೋಟಿ ರೂ. ಆದಾಯ ಬಂದಿದೆ. ಎಲೆಕ್ಟೋರಲ್‌ ಬಾಂಡ್‌ಗಳ ಮೂಲಕ ದೇಣಿಗೆ ಸಲ್ಲಿಕೆಯಾಗಿದ್ದು, ಅವು ಗಳ ಮೂಲ ಶೇ.76ರಷ್ಟು ಅನಾಮಧೇಯವಾಗಿದೆ ಎಂದು ಎಸೋಸಿಯೇಶನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾಮ್ಸ್‌ (ಎಡಿಆರ್‌) ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

ಈ ಪೈಕಿ ಡಿಎಂಕೆಗೆ 302.06 ಕೋಟಿ (ಮೊದಲ ಸ್ಥಾನ), ಬಿಜು ಜನತಾದಳ 291. 09 ಕೋಟಿ ( ದ್ವಿತೀಯ), ಟಿಆರ್‌ಎಸ್‌ (ಈಗ ಬಿಆರ್‌ಎಸ್‌)ಗೆ 153.03 ಕೋಟಿ (ತೃತೀಯ), ವೈಎಸ್‌ಆರ್‌ ಕಾಂಗ್ರೆಸ್‌ಗೆ 60.01 ಕೋಟಿ ರೂ., ಜೆಡಿಯುಗೆ 48.36 ಕೋಟಿ ರೂ. ದೇಣಿಗೆ ಲಭಿಸಿದೆ. ಪ್ರಾದೇಶಿಕ ಪಕ್ಷಗಳಿಗೆ ಸಿಕ್ಕಿರುವ 1,165 ಕೋಟಿ ರೂ ಮೊತ್ತದ ಪೈಕಿ 145.42 ಕೋಟಿ ರೂ. ಮೊತ್ತ ಮಾತ್ರ ದೃಢ ಪಟ್ಟ ಆದಾಯ ಮೂಲಗಳಿಂದ ಬಂದಿದೆ. ಬ್ಯಾಂಕ್‌ನಲ್ಲಿ ಇರುವ ಠೇವಣಿಯಿಂದ ಬಂದ ಆದಾಯ, ಸದಸ್ಯತ್ವ ಶುಲ್ಕ, ಮಾಹಿತಿ ಪುಸ್ತಿಕೆ ಗಳ ಮಾರಾಟದಿಂದಲೂ ಆದಾಯ ಬಂದಿದೆ. ಅನಾಮಧೇಯ ಮೂಲಗಳು ಎಂದರೆ ಎಲೆಕ್ಟೋರಲ್‌ ಬಾಂಡ್‌ಗಳ ಮಾರಾಟದಿಂದಲೇ 827.76 ಕೋಟಿ ರೂ. ಅಂದರೆ ಶೇ,93.26. ಆಗಿದೆ ಎಂದು ಎಡಿಆರ್‌ ವರದಿಯಲ್ಲಿ ಉಲ್ಲೇಖೀಸಲಾಗಿದೆ. 2020-21ನೇ ಸಾಲಿನಲ್ಲಿ 530. 70 ಕೋಟಿ ರೂ. ಆದಾಯ ಪಕ್ಷಗಳಿಗೆ ಬಂದಿತು

Advertisement

Udayavani is now on Telegram. Click here to join our channel and stay updated with the latest news.

Next