ಹಿಂದುತ್ವ, ಜಾತಿ -ಜಾತಿಗಳ ನಡುವಿನ ಮತಗಳ ಧ್ರುವೀಕರಣ, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ಧ ಅಪಪ್ರಚಾರ, ಅಭ್ಯರ್ಥಿ ಹೆಸರಲ್ಲಿ ಮತ ಕೇಳದೆ ಪ್ರಧಾನಿ ಮತ ಕೇಳಿದ್ದು, ಬಿಜೆಪಿಯಿಂದ ಧರ್ಮದ ಹೆಸರಲ್ಲಿ ಭಾವನಾತ್ಮಕವಾಗಿ ಪ್ರಚಾರ ಸೋಲಿಗೆ ಕಾರಣ.
Advertisement
ನಿಮ್ಮ ಮುಂದಿನ ರಾಜಕೀಯ ನಡೆ?ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಹಾಲಿ ಶಾಸಕರಿಗೆ ಯಾವುದೇ ಹಸ್ತಕ್ಷೇಪ ಮಾಡದೇ ಸಹಕರಿಸುತ್ತೇನೆ. ಇನ್ನು 5 ವರ್ಷ ಪಕ್ಷವನ್ನು ಸಂಘಟಿಸಲು ಹೆಚ್ಚಿನ ಆದ್ಯತೆ ಕೊಡುತ್ತೇನೆ. ಮುಂದಿನ ಬಾರಿಯ ಸ್ಫರ್ಧೆಯನ್ನು
ಪಕ್ಷ ತೀರ್ಮಾನ ಮಾಡುತ್ತದೆ.
ಶಾಸಕರೇ ಹೇಳಿದಂತೆ ಸಮುದ್ರಕ್ಕೆ ಹೋಗುವ ನೀರನ್ನು ತಡೆದು ಬೈಂದೂರಿನ ಪ್ರತಿ ಮನೆಗೂ ಕುಡಿಯುವ ನೀರನ್ನು ಒದಗಿಸುತ್ತೇನೆಂದು ಹೇಳಿದ್ದಾರೆ. ಅದನ್ನು ಆದ್ಯತೆ ಮೇರೆಗೆ ಪೂರೈಸಲಿ. ಮೆಡಿಕಲ್ ಕಾಲೇಜು, ವಿಮಾನ ನಿಲ್ದಾಣ ಆಶ್ವಾಸನೆ ನೀಡಿದ್ದಾರೆ. ಆದಷ್ಟು ಶೀಘ್ರ ನಿರ್ಮಾಣವಾಗುವಂತಾಗಲಿ.