ಪಟ್ಟಣದ ಗುರುಪಾದ ದೇವರ ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ದಮ್ಮು, ಕೆಮ್ಮಿಗೆ ಉಚಿತ ಔಷಧ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
Advertisement
ನಮ್ಮ ದೇಶದಲ್ಲಿ ಹಿಂದಿನಿಂದಲೂ ಆಯುರ್ವೇದ ಪದ್ಧತಿಯನ್ನು ಅನುಸರಿಸುತ್ತಾ ಬರಲಾಗುತ್ತಿದೆ. ಮೃಗಶಿರ ಮಳೆ ನಕ್ಷತ್ರ ಕೂಡುವ ವೇಳೆಗೆ ನೀಡಲಾಗುವ ದಮ್ಮು, ಕೆಮ್ಮಿನ ಔಷಧಿ ಯನ್ನು ಪ್ರತಿಯೊಬ್ಬರೂ ಸತತ ಮೂರು ವರ್ಷಗಳ ಕಾಲ ತೆಗೆದುಕೊಳ್ಳಬೇಕು ಎಂದರು.
ಗಮನ ಹರಿಸಬೇಕು. ಇತ್ತೀಚೆನ ದಿಮಾನಗಳಲ್ಲಿ ಯುವಕರು ಧೂಮಪಾನ, ಮದ್ಯಪಾನ ಸೇರಿದಂತೆ ಇನ್ನಿತೆ ದುಶ್ಚಟಗಳಿಗೆ ದಾಸರಾಗುತ್ತಿದ್ದು, ಅವುಗಳಿಂದ ದೂರವಿರಬೇಕು. ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಮೂಲಕ ಉತ್ತಮ ನಾಗರಿರಕರನ್ನಾಗಿ ರೂಪಿಸಬೇಕು ಎಂದು ಹೇಳಿದರು. ಪ್ರತಿ ವರ್ಷವೂ ಮಠದಲ್ಲಿ ಈ ಕಾರ್ಯಕ್ರಮವನ್ನು ಮಾಡಲಾಗುವುದು. ಭಕ್ತಾದಿಗಳು ಇದರ ಸದುಪಯೋಗವನ್ನು
ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಗರಗ ನಾಗಲಾಪುರ ದಿ| ದೊಡ್ಡ ಹನುಮಂತಪ್ಪ ಅವರ ಪುತ್ರರಾದ ಉಮಾಪತಿ ಮತ್ತಿ ಗಜೇಂದ್ರ ಅವರು ಔಷಧಿಯನ್ನು ಪಡೆಯಲು ಬಂದಿದ್ದ ನೂರಕ್ಕೂ ಹೆಚ್ಚು ಜನರಿಗೆ ದಮ್ಮು, ಕೆಮ್ಮಿನ ಔಷಧ ವಿತರಿಸಿದರು.
Related Articles
Advertisement