Advertisement
ಇದುವರೆಗೆ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಕೆಎ 19 ನೋಂದಣಿಯ ಕಾರುಗಳಿಗೆ ಇದ್ದ ರಿಯಾಯಿತಿ ರದ್ದಾಗಲಿದೆ. ಇನ್ನು ಮುಂದೆ ಹೆದ್ದಾರಿಯಲ್ಲಿ ಉಡುಪಿ-ಮಂಗಳೂರು ಮಧ್ಯೆ ಸಂಚರಿಸುವವರು ಹೆಜಮಾಡಿಯ 40 ರೂ. ಹಾಗೂ ಸುರತ್ಕಲ್‌ನ 60 ರೂ. ಸೇರಿದಂತೆ 100 ರೂ. ಪಾವತಿ ಮಾಡಲೇಬೇಕು. ಆದರೆ ಹೆಜಮಾಡಿ ಟೋಲ್‌ಗೇಟ್ ಒಳಗೆ ಮಂಗಳೂರು ಮಧ್ಯೆ ಸಂಚರಿಸುವ ಬಸ್, ಟೂರಿಸ್ಟ್ ವಾಹನ, ಲಾರಿ ಮತ್ತಿತರ ವಾಹನಗಳಿಗೆ ಟೋಲ್ ಪಾವತಿಸಬೇಕಾದ ಪ್ರಮೇಯವಿರುವುದಿಲ್ಲ.
Related Articles
Advertisement
ಹೋರಾಟ ಸಮಿತಿ ಆಕ್ರೋಶ:
ಅತ್ಯಂತ ಜನವಿರೋಧಿ ಸರಕಾರ ಮಾತ್ರ ಹೀಗೆ ಮಾಡಲು ಸಾಧ್ಯ. ಸುರತ್ಕಲ್ ಟೋಲ್ ದರವನ್ನು ಪೂರ್ತಿಯಾಗಿ ಸೇರಿಸಿ ಹೆಜಮಾಡಿ ಯಲ್ಲಿ ಸಂಗ್ರಹಿಸಲು (ಸುಲಿಗೆ ನಡೆಸಲು) ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಇದು ತುಳುನಾಡಿನ ಜನತೆಗೆ ಎಸಗಿದ ಮಹಾ ಮೋಸ. ಏಳು ವರ್ಷಗಳ ಕಾಲ ಸುರತ್ಕಲ್ ಟೋಲ್ ಗೇಟ್‌ನಲ್ಲಿ ಸಂಗ್ರಹಿಸಿದ ನೂರಾರು ಕೋಟಿ ರೂಪಾಯಿಗೆ ಬೆಲೆಯೇ ಇಲ್ಲವಾಗಿದೆ ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.
ಜನರ ಭಾವನೆ, ಕಷ್ಟ ಸುಖಗಳ ಅರಿವಿಲ್ಲದ ಸಂಸದ, ಶಾಸಕರು ಮಾತ್ರ ಹೀಗೆ ನಡೆದುಕೊಳ್ಳಲು ಸಾಧ್ಯ. ಮತ ಹಾಕುವ ಇಲ್ಲಿನ ಜನರಿಗಿಂತ ನವಯುಗ್ ಟೋಲ್ ಕಂಪೆನಿಯ ಹಿತ ಮಾತ್ರ ಅವರಿಗೆ ಮುಖ್ಯವಾಯಿತು. ಜನತೆ ಇದನ್ನು ಒಪ್ಪಬಾರದು ಎಂದು ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.