Advertisement
ದ.ಕ. ಜಿಲ್ಲೆಯ ವಿವಿಧೆಡೆೆ ಸೋಮ ವಾರ ತಡರಾತ್ರಿಯಿಂದಲೇ ಸುರಿದ ಮಳೆ ಮಂಗಳವಾರ ಬೆಳಗಿನ ಜಾವದ ವರೆಗೂ ಮುಂದುವರಿದಿತ್ತು. ಬಳಿಕ ತುಸು ಬಿಡುವು ನೀಡಿದ ಮಳೆ ಮಧ್ಯಾಹ್ನ ಬಳಿಕ ಸುರಿಯಲಾರಂಭಿಸಿದೆ. ಮಂಗಳೂರು, ಬೆಳ್ತಂಗಡಿ, ಧರ್ಮ ಸ್ಥಳ, ಗುರುವಾಯನಕೆರೆ, ಮಡಂತ್ಯಾರು, ಕಡಬ, ಬಾಯಾರು, ಮಂಜೇಶ್ವರ, ಉಳ್ಳಾಲ, ಸುರತ್ಕಲ್, ಬಂಟ್ವಾಳ, ಕನ್ಯಾನ, ಉಪ್ಪಿನಂಗಡಿ, ಸುಳ್ಯ, ಸುಬ್ರಹ್ಮಣ್ಯ ಸಹಿತ ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿದಿದೆ. ಉಡುಪಿ ಜಿಲ್ಲೆಯಲ್ಲಿಯೂ ಉತ್ತಮ ಮಳೆಯಾಗಿದೆ.
ಪುತ್ತೂರು: ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಪಟ್ನೂರು ಗ್ರಾಮದ ನೆಲಪ್ಪಾಲು ನಿವಾಸಿ ವಸಂತ ಅವರ ಮನೆ ಸಮೀಪದಲ್ಲಿರುವ ದನದ ಹಟ್ಟಿಯ ಗೋಡೆ ಕುಸಿದು ದನ ಮತ್ತು ಕರು ಮೃತಪಟ್ಟಿವೆ. ಸ್ಥಳಕ್ಕೆ ತಹಶೀಲ್ದಾರ್ ಕುಂಞಿ ಅಹಮ್ಮದ್, ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರು ಭೇಟಿ ನೀಡಿ ಪರಿಶೀಲಿಸಿದರು. 4 ದಿನ “ಎಲ್ಲೋ ಅಲರ್ಟ್’
ಕರಾವಳಿ ಭಾಗದಲ್ಲಿ ಮಳೆ ಇನ್ನಷ್ಟು ಬಿರುಸು ಪಡೆದುಕೊಂಡಿದ್ದು, ಮೇ 22ರಿಂದ 25ರ ವರೆಗೆ “ಎಲ್ಲೋ ಅಲರ್ಟ್’ ಘೋಷಣೆ ಮಾಡಲಾಗಿದೆ. ಈ ವೇಳೆ ಬಿರುಸಿನ ಮಳೆಯಾಗುವ ಸಾಧ್ಯತೆ ಇದೆ.