Advertisement
ಒಟ್ಟಿನಲ್ಲಿ ಸರಿಯಾದ ರೀತಿಯ ಟೌನ್ ಪ್ಲ್ಯಾನಿಂಗ್ ಮತ್ತು ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮುಂಗಾರು ಮಳೆಯ ಪ್ರಾರಂಭದಲ್ಲೇ ಕರಾವಳಿ ಇತ್ತೀಚಿನ ದಿನಗಳಲ್ಲಿ ಕಾಣದಿದ್ದ ಕೃತಕ ನೆರೆ ಇಲ್ಲಿನ ಸಾಮಾನ್ಯ ಜನರ ಬದುಕನ್ನು ಅಕ್ಷರಸಹ ನರಕವನ್ನಾಗಿಸುತ್ತಿದೆ. ಸ್ಮಾರ್ಟ್ ಸಿಟಿಯಾಗುವತ್ತ ಸಾಗುತ್ತಿರುವ ಮಂಗಳೂರು ನಗರಕ್ಕೆ ಈ ರೀತಿಯ ಪ್ರಾಕೃತಿಕ ವಿಪತ್ತುಗಳು ಅಪ್ಪಳಿಸಿದಾಗ ನಗರ ಸ್ವರೂಪದ ಬಂಡವಾಳ ಬಯಲಾಗುತ್ತದೆ. ಇನ್ನಾದರೂ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಮಂಗಳೂರಿಗರ ಬದುಕನ್ನು ಸಹ್ಯವಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಾರೋ ಎಂಬುದನ್ನು ಕಾದುನೋಡಬೇಕಾಗಿದೆ.
– ಮಂಗಳೂರು ನಗರದಾದ್ಯಂತ ನೆರೆ ನೀರಿನಿಂದ ಸಾರ್ವಜನಿಕರು ತೊಂದರೆಗೊಳಗಾಗಿರುವುದರಿಂದ ನಗರವಾಸಿಗಳಿಗೆ ತುರ್ತು ಔಷಧಿಗಳು ಅಥವಾ ವೈದ್ಯಕೀಯ ನೆರವಿನ ಅಗತ್ಯವನ್ನು ಪೂರೈಸಲು ಟೀಂ ಹೆಲ್ತ್ –ಇ ಎಂಬ ಉತ್ಸಾಹಿಗಳ ತಂಡವು ಯಾವುದೇ ಸರ್ವಿಸ್ ಚಾರ್ಜ್ ಇಲ್ಲದೇ ನಿಮ್ಮ ಮನೆ ಬಾಗಿಲಿಗೆ ಔಷಧಿಗಳನ್ನು ತಲುಪಿಸುವ ಉತ್ತಮ ಕಾರ್ಯವನ್ನು ಮಾಡುತ್ತಿದೆ. ದಯವಿಟ್ಟು ಈ ಸೇವೆಯ ಸದುಪಯೋಗವನ್ನು ಮಂಗಳೂರು ನಗರವಾಸಿಗಳು ಪಡೆದುಕೊಳ್ಳಿ, ನೀವು ಮಾಡಬೇಕಾಗಿರುವುದಿಷ್ಟೇ : ತುರ್ತು ಔಷಧಿಗಳಿಗೆ ನಿಮ್ಮ ಬಳೀಯಿರುವ ಮೆಡಿಕಲ್ ಪ್ರಿಸ್ಕ್ರಿಪ್ಷನ್ ಅನ್ನು 9148247777 ಸಂಖ್ಯೆಗೆ ವಾಟ್ಸ್ಯಾಪ್ ಮಾಡಿ. ಸಂಪರ್ಕ ವ್ಯಕ್ತಿಯ ಹೆಸರು: ನೀರವ್ ಭಂಡಾರಿ – ನಗರಕ್ಕೆ ಬರಲಿದೆ NDRF ತಂಡ. ಬುಧವಾರದಂದು ನಗರಕ್ಕೆ ಕಾಲಿಡಲಿದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ. ಇದರಿಂದ ರಕ್ಷಣೆ ಮತ್ತು ಪರಿಹಾರ ಕಾರ್ಯಗಳು ವೇಗ ಪಡೆದುಕೊಳ್ಳುವ ಸಾಧ್ಯತೆ.
Related Articles
Advertisement
– ಈಗಾಗಲೇ ನಗರದ ಐದು ಕಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಯವರಿಂದ ಮಾಹಿತಿ.
– ಬುಧವಾರದಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ.
– ಭಾರೀ ಮಳೆ ಮತ್ತು ಕೃತಕ ನೆರೆಗೆ ನಗರದಲ್ಲಿ ಎರಡು ಜೀವಗಳ ಬಲಿ.
– ಮಳೆ ನೀರಿನಲ್ಲಿ ತೇಲಿಬಂದು ಆತಂಕ ಸೃಷ್ಟಿಸಿದ ಹಾವು.