Advertisement
ನಾಲ್ಕನೇ ಶನಿವಾರ, ರವಿವಾರ, ನರಕ ಚತುರ್ದಶಿ, ಬಲಿಪಾಡ್ಯ ಸೇರಿದಂತೆ ಬಧವಾರದವರೆಗೆ ಸರಣಿ ರಜೆ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬಹುತೇಕ ಮಂದಿ ಹಬ್ಬ ಆಚರಿಸಲು ಊರಿಗೆ ಬಂದಿದ್ದರು. ಬಹುತೇಕ ಪ್ರವಾಸಿಗರು ಕುಟುಂಬ ಸಮೇತರಾಗಿ ಪ್ರವಾಸಿ ತಾಣಗಳಿಗೆ ಹೊರಟಿದ್ದರು. ರವಿವಾರ ಬೆಳಗ್ಗಿನಿಂದ ವಾಹನಗಳ ಸಾಲು ಮಲ್ಪೆ ಕಡೆಗೆ ಬರುತ್ತಿದ್ದವು. ಬಹುತೇಕ ಬೆಂಗಳೂರು, ಮೈಸೂರು, ಕೇರಳ ಹಾಗೂ ತಮಿಳುನಾಡಿನಿಂದ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದಾರೆ. ಸೈಂಟ್ ಮೇರಿಸ್ ಐಲ್ಯಾಂಡ್, ಸೀವಾಕ್ ವೇನಲ್ಲೂ ಜನಸಂದಣಿ ಕಂಡು ಬಂದಿದೆ.
Related Articles
ಸಾಲು ರಜೆಯಿಂದಾಗಿ ಕೆಲವೊಂದು ಪ್ರಮುಖ ಪ್ರವಾಸಿ ತಾಣಗಳಲ್ಲಿ ವಸತಿ ಗೃಹಗಳ ಸಮಸ್ಯೆ ಎದುರಾಗಿದೆ. ವಸತಿ ಗೃಹಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು ಕೆಲವರು ತಿಂಗಳ ಮೊದಲೇ ಹೋಮ್‌ಸ್ಟೇ, ವಸತಿಗೃಹ, ಕೊಠಡಿಯನ್ನು ಕಾಯ್ದಿರಿಸಿಕೊಂಡಿದ್ದರೆ ಕೆಲವರು ರೂಮಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.
Advertisement
ಟ್ರಾಫಿಕ್ ಜಾಮ್ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಎದುರಿಸುತ್ತಿರುವ ಮಲ್ಪೆ ರಸ್ತೆಯಲ್ಲಿ ಇದೀಗ ಪ್ರವಾಸಿಗರ ವಾಹನ ಸಂಚಾರದಿಂದಾಗಿ ವಾಹನ ದಟ್ಟಣೆ ಇನ್ನೂ ಹೆಚ್ಚಾಗಿ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ. ಟ್ರಾಫಿಕ್ ಜಾಮ್ ಸಮಸ್ಯೆ ಬುಧವಾರದ ವರೆಗೂ ಮುಂದುವರಿಯುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ಪೊಲೀಸರು ವಾಹನ ನಿಯಂತ್ರಣದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ : ಇಂದಿನಿಂದ ಎಲ್ಲೆಡೆ ದೀಪಾವಳಿ ಸಂಭ್ರಮ : ಕರಾವಳಿಯಲ್ಲೆಡೆ ಸಕಲ ತಯಾರಿ