Advertisement
ಹೃದಯಾಘಾತಕ್ಕೆ ಕಾರಣಗಳುನಮ್ಮ ಹೃದಯಕ್ಕೆ ರಕ್ತ ಪರಿಚಲನೆ ಸ್ಥಗಿತಗೊಂಡಾಗ ಅಥವಾ ರಕ್ತ ಪ್ರವಹಿಸಲು ಅಡ್ಡಿಯಾದಾಗ ಹೃದಯದ ಜೀವಕೋಶಗಳು ಸಾಯುತ್ತವೆ. ಇದರಿಂದಾಗಿ ಹೃದಯಾಘಾತ ಸಂಭವಿಸುತ್ತದೆ. ಹೃದಯಾಘಾತ ಸಂಭವಿಸಲು ಕೆಲವೊಂದು ಕಾರಣಗಳನ್ನು ಗುರುತಿಸಬಹುದಾಗಿದೆ. ಹೃದಯದ ಸ್ನಾಯುಗಳಿಗೆ ರಕ್ತದ ಮೂಲಕ ಆಮ್ಲಜನಕ ಮತ್ತು ಯುಕ್ತ ಪೋಷಕಾಂಶಗಳನ್ನು ಒದಗಿಸುವ ಪರಿದಮನಿ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹಗೊಂಡು ರಕ್ತದೊತ್ತಡ ಉಂಟಾಗುತ್ತದೆ. ಸಾಮಾನ್ಯವಾಗಿ ಈ ರಕ್ತದೊತ್ತಡದಿಂದಾಗಿಯೇ ಹೃದಯದಲ್ಲಿ ರಂಧ್ರಗಳು ಉಂಟಾಗಿ ರಕ್ತವೂ ಹೆಪ್ಪುಗಟ್ಟುತ್ತದೆ. ಈ ಹೆಪ್ಪುಗಟ್ಟುವಿಕೆಯಿಂದಾಗಿಯೇ ರಕ್ತನಾಳಗಳ ರಕ್ತ ಪರಿಚಲನೆ ಸ್ಥಗಿತಗೊಂಡು ಹೃದಯಾಘಾತ ಉಂಟಾಗುತ್ತದೆ. ಅಧಿಕ ರಕ್ತದೊತ್ತಡ, ಧೂಮಪಾನ, ಮದ್ಯಪಾನ, ಹೆಚ್ಚಿನ ಬೊಜ್ಜಿನಿಂದ ಹೃದಯಾಘಾತ ಸಂಭವಿಸುತ್ತದೆ. ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲಿ ಬಹುತೇಕರು ಸೂಕ್ತ ಚಿಕಿತ್ಸೆಯಿಂದ ಬದುಕುಳಿದ ಸಂದರ್ಭವಿದೆ. ಆದರೆ ಹೃದಯ ಸ್ತಂಬನವಾದಾಗ ಕೆಲವೇ ನಿಮಿಷಗಳಲ್ಲಿ ಚಿಕಿತ್ಸೆ ನೀಡದಿದ್ದರೆ ರೋಗಿಗಳು ಬದುಕುಳಿಯುವುದು ಕಷ್ಟಸಾಧ್ಯ.
ಹೃದಯಸ್ತಂಭನವೂ ಹೃದಯಾಘಾತಕ್ಕಿಂತ ಭಿನ್ನ ಸಮಸ್ಯೆಯಾಗಿದೆ. ಇಲ್ಲಿ ಹೃದಯವೂ ದಿಢೀರನೇ ಕೆಲಸ ನಿಲ್ಲಿಸುವುದರಿಂದ ಹೃದಯ ಸ್ತಂಭನ ಉಂಟಾಗುತ್ತದೆ. ಎಲ್ಲ ಪ್ರಮುಖ ಅಂಗಗಳಿಗೆ ರಕ್ತ ಪೂರೈಕೆ ಏಕಾಏಕೀ ಕಡಿತಗೊಳಿಸಿ ನಮ್ಮ ಮಿದುಳು, ಹೃದಯದ ಭಾಗಗಳ ನಿಷ್ಕ್ರಿಯಗೊಳ್ಳುತ್ತವೆ. ಪ್ರಜ್ಞೆ ತಪ್ಪಿ ಸಾವು ಸಂಭವಿಸುತ್ತದೆ. ಕೆಲವೊಂದು ಅಂಶಗಳಿಂದ ಈ ಎರಡೂ ಸಮಸ್ಯೆಗಳು ಭಿನ್ನ ಎಂದು ವೈದ್ಯರು ಗುರುತಿಸುತ್ತಾರೆ. ಮಾದಕ ವಸ್ತುಗಳ ಸೇವನೆ, ಹೃದಯ ಸಂಬಂಧಿ ರೋಗಗಳಿಗೆ ಚಿಕಿತ್ಸೆ ನಿರ್ಲಕ್ಷಿಸುವುದು ಮತ್ತು ಹೃದಯ ಭಾಗಗಳಲ್ಲಿ ಹಾನಿಯಾದಾಗ ಹೃದಯ ಸ್ತಂಭನ ಉಂಟಾಗುತ್ತದೆ. - ಅಭಿನವ