Advertisement

ಆರೋಗ್ಯ ಸಚಿವರ ರಾಜೀನಾಮೆಗೆ ಆಗ್ರಹ

12:59 PM Oct 25, 2017 | Team Udayavani |

ಬೆಂಗಳೂರು: ಧನದಾಹಿ ವೈದ್ಯರನ್ನು ದೂಷಿಸುವ ಬರದಲ್ಲಿ ಕ್ಷೌರಿಕರ ವೃತ್ತಿಯನ್ನು ಟೀಕಿಸಿರುವ ಆರೋಗ್ಯ ಸಚಿವ ರಮೇಶ್‌ ಕುಮಾರ್‌ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸವಿತಾ ಸಮುದಾಯದ ಮೀಸಲಾತಿ ಹೋರಾಟ ಸಮಿತಿ ಸದಸ್ಯರು ನಗರದ ಟೌನ್‌ ಹಾಲ್‌ ಬಳಿ ಪ್ರತಿಭಟನೆ ನಡೆಸಿರು.

Advertisement

ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಟಿ.ತ್ಯಾಗರಾಜ್‌ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೈದ್ಯರನ್ನು ದೂಷಿಸುವ ಬರದಲ್ಲಿ ಅನಗಯ್ಯ ಸಿಜೀರಿಯನ್‌ ಮಾಡುವ ವೈದ್ಯರು ಮತ್ತು ಜೇಬುಗಳ್ಳರು ಎಂದು ಹೇಳಿಕೆ ನೀಡಿ ಕ್ಷೌರಿಕ ವೃತ್ತಿಗೆ ಅವಮಾನನಿಸಿದ್ದಾರೆ. ಇದು ತೀವ್ರ ಖಂಡನೀಯ ಎಮದು ಆಕ್ರೋಶ ವ್ಯಕ್ತಪಡಿಸಿದರು.

ಈ ಹೇಳಿಕೆ ಹಿನ್ನೆಲೆಯಲ್ಲಿ ಸಚಿವ ರಮೇಶ್‌ ಕುಮಾರ್‌ ಸವಿತಾ ಸಮುದಾಯದ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲವೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಯವರು ಸಂಪುಟದಿಂದ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಒಬಿಸಿ ಪತ್ರಕರ್ತರ ಮತ್ತು ಸಂಪಾದಕರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next