Advertisement

ಕೊರೊನಾ ಚಿಕಿತ್ಸೆಗೆ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ ಸಜ್ಜು

01:55 AM Apr 25, 2021 | Team Udayavani |

ಮೂಡುಬಿದಿರೆ: ಕೋವಿಡ್‌ ಪಾಸಿಟಿವ್‌ ಆಗಿ ಕಂಡು ಬಂದವರಿಗೆ ಈಗ ಹೋಂ ಐಸೋಲೇಶನ್‌ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಪ್ರತ್ಯೇಕವಾದ ಸ್ನಾನದ ಕೋಣೆ, ಶೌಚಾಲಯದೊಂದಿಗೆ ಬೆಡ್‌ರೂಮ್‌ನ ವ್ಯವಸ್ಥೆ ಇರುವವರಿಗೆ ಹೋಂ ಐಸೋಲೇಶನ್‌ಗೆ ಅವಕಾಶ ಕಲ್ಪಿಸಲಾಗಿದೆ. ಇಂಥ ಸೌಕರ್ಯಗಳಿಲ್ಲದವರಿಗೆ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ಸಾಲಿನಿಂದಲೇ 6 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ.

Advertisement

ಹಳೆ ಕಟ್ಟಡದಲ್ಲಿರುವ ಈ ವ್ಯವಸ್ಥೆ ಮುಂದಕ್ಕೆ ಅಗತ್ಯ ನೋಡಿಕೊಂಡು ಹೊಸ ಕಟ್ಟಡಕ್ಕೆ ವರ್ಗಾಯಿಸುವ ಯೋಜನೆ ಇದೆ. ಹೊಸ ಕಟ್ಟಡದಲ್ಲಿ ಕೇಂದ್ರೀಕೃತ ಆಮ್ಲಜನಕ ಲೈನ್‌ ರೂಪಿಸಲಾಗಿದ್ದು ಸಿಲಿಂಡರ್‌ ಇನ್ನಷ್ಟೇ ಬರಬೇಕಾಗಿದೆ. ಕೋವಿಡ್‌ ಶಂಕೆಯನ್ನು ದೃಢಪಡಿಸಲು ಗ‌ಂಟಲ ದ್ರವ ಪರೀಕ್ಷೆಯ ವ್ಯವಸ್ಥೆ ಕಾರ್ಯಾಚರಿಸುತ್ತಿದೆ. ಆದರೆ ಜನ ಯಾವುದೋ ಕಾರಣದಿಂದ ಅಷ್ಟಾಗಿ ಮುಂದೆ ಬರುತ್ತಿಲ್ಲದ ಸ್ಥಿತಿ ಇದೆ. ಇನ್ನು ಇಲ್ಲಿ ಅಗತ್ಯವಾಗಿ ಬೇಕಾಗಿರುವುದು ವೆಂಟಿಲೇಟರ್‌ ವ್ಯವಸ್ಥೆ.

ಅದಿನ್ನೂ ಆಗಿಲ್ಲ. ಉಳಿದಂತೆ, ಆಸ್ಪತ್ರೆಯಲ್ಲಿ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ| ಶಶಿಕಲಾ ಸಹಿತ ಈಗಿರುವ ವೈದ್ಯಕೀಯ ಸಿಬಂದಿಗಳೇ ಕೋವಿಡ್‌ ಪಾಸಿಟಿವ್‌ ರೋಗಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಸದ್ಯ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಸಿಕೆ ನೀಡುವ ಪ್ರಕ್ರಿಯೆ
ಗುರುವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಬೆಳಗ್ಗೆ 10ರಿಂದ ಅಪರಾಹ್ನ 4ರ ವರೆಗೆ ಲಸಿಕೆ ನೀಡಲಾಗುತ್ತಿದೆ.
ಉಳಿದಂತೆ ಸಮುದಾಯ ಆರೋಗ್ಯ ಕೇಂದ್ರದವರು ಅಲ್ಲಲ್ಲಿ ಸ್ಥಳೀಯರ ಸಹಕಾರದಲ್ಲಿ ನಡೆಸುತ್ತಿರುವ ಶಿಬಿರಗಳಲ್ಲಿ ಬೆಳಗ್ಗೆ 10ರಿಂದ 2ರ ವರೆಗೆ (ಕೆಲವೆಡೆ ಗಂ.1) ಲಸಿಕೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next