Advertisement

ಸಾರಿಗೆ ಬಸ್‌ನಲ್ಲೇ ಎಚ್ಡಿಕೆ ಪ್ರಯಾಣ

10:57 PM Jun 21, 2019 | Team Udayavani |

ಯಾದಗಿರಿ: ಎಚ್‌.ಡಿ. ಕುಮಾರಸ್ವಾಮಿ ರೈಲಿನ ಮೂಲಕ ಯಾದಗಿರಿಗೆ ಆಗಮಿಸಿ, ಗುರುಮಿಠಕಲ್‌ ತಾಲೂಕಿನ ಚಂಡರಕಿ ಗ್ರಾಮಕ್ಕೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ಸರಳತೆ ಮೆರೆದರು.

Advertisement

ಈ ನಿಟ್ಟಿನಲ್ಲಿ ದುಂದು ವೆಚ್ಚಕ್ಕೆ ಅವಕಾಶ ನೀಡಲ್ಲ ಎಂದು ಹೇಳಿದಂತೆಯೇ ರೈಲಿನ ಮೂಲಕ ಆಗಮಿಸಿ ಸಾರಿಗೆ ಬಸ್‌ನಲ್ಲಿ ಗ್ರಾಮ ವಾಸ್ತವ್ಯಕ್ಕೆ ಪ್ರಯಾಣ ಬೆಳೆಸಿದರು. ನಗರದ ಸರ್ಕ್ನೂಟ್‌ ಹೌಸ್‌ನಿಂದ 9:30ರ ವೇಳೆಗೆ ಪೊಲೀಸ್‌ ಗೌರವ ವಂದನೆ ಸ್ವೀಕರಿಸಿದ ಬಳಿಕ ಗುರುಮಿಠಕಲ್‌ ಶಾಸಕ ನಾಗನಗೌಡ ಕಂದಕೂರ ಮನೆಗೆ ತೆರಳಿ ಉಪಾಹಾರ ಸೇವಿಸಿದರು.

ಬಳಿಕ ಸಿಎಂ ಪ್ರಯಾಣಕ್ಕೆ ಸಿಂಗಾರಗೊಂಡಿದ್ದ ಕೆಎ 33, ಎಫ್‌ 0525 ಸಂಖ್ಯೆಯ ಬಸ್‌ನಲ್ಲಿ 10:30ಕ್ಕೆ ಪ್ರಯಾಣ ಬೆಳೆಸಿ ಗುರುಮಿಠಕಲ್‌ ಮಾರ್ಗವಾಗಿ ಮಧಾ°ಹ್ನ 12 ಗಂಟೆಗೆ ಚಂಡರಕಿ ತಲುಪಿದರು. ಮುಖ್ಯಮಂತ್ರಿಗಳನ್ನು ಬಸ್‌ ನಿಲ್ದಾಣದಿಂದ ಸಿಹಿ ನೀರಿನ ಬಾವಿವೃತ್ತದ ವರೆಗೆ ಸಾಲಾಗಿ ಸಾಂಪ್ರದಾಯಿಕ ತೆನೆ ಹೊತ್ತ ಮಹಿಳೆಯರು ಸ್ವಾಗತ ಕೋರಿದರು.

ಸಾಗರೋಪಾದಿಯಲ್ಲಿ ಆಗಮಿಸಿದ ಜನತೆ: ಸಿಎಂ ಗ್ರಾಮ ವಾಸ್ತವ್ಯ ನಿಮಿತ್ತ ಶುಕ್ರವಾರ ಚಂಡರಕಿಗೆ ಸಾಗರೋಪಾದಿಯಲ್ಲಿ ಜನತೆ ಹರಿದು ಬಂದಿತ್ತು. ಯಾದಗಿರಿ ಜಿಲ್ಲೆ ಸೇರಿದಂತೆ ಪಕ್ಕದ ಕಲಬುರಗಿ, ಬೀದರ್‌, ರಾಯಚೂರು ಜಿಲ್ಲೆಗಳಿಂದ ಜನತೆ ಅಹವಾಲು ಸಲ್ಲಿಸಲು ಆಗಮಿಸಿದ್ದರು. ಚಂಡರಕಿ ಗ್ರಾಮದ ಹೊರ ವಲಯದಲ್ಲೇ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಸುಮಾರು ಎರಡು ಕಿಮೀ ನಡೆದುಕೊಂಡು ವೇದಿಕೆಗೆ ತಲುಪುವಷ್ಟರಲ್ಲಿ ಹೈರಾಣಾಗುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next