Advertisement

ಮೂನ್‌ಲೈಟ್‌ ಸಹಿಸಲು ಸಾಧ್ಯವಿಲ್ಲ: ಎಚ್‌ಸಿಎಲ್‌

08:20 PM Oct 13, 2022 | Team Udayavani |

ನವದೆಹಲಿ: ಐಟಿ ಕಂಪನಿಗಳಲ್ಲಿ ಮೂನ್‌ಲೈಟ್‌ (ಒಂದು ಸಂಸ್ಥೆಯಲ್ಲಿದ್ದುಕೊಂಡು ಇತರ ಕಂಪನಿಗಳಿಗೆ ಕೆಲಸ ಮಾಡುವುದು) ಕೆಲಸಗಾರರಿಗೆ ಇನ್ಫೋಸಿಸ್‌, ಟಿಸಿಎಸ್‌ ಮತ್ತು ವಿಪ್ರೋ ಕಂಪನಿಗಳು ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಎಚ್‌ಸಿಎಲ್‌ ಕೂಡ ಮೂನ್‌ಲೈನ್‌ ವಿಚಾರದಲ್ಲಿ ಮಾತನಾಡಿದೆ.

Advertisement

“ಮೂನ್‌ಲೈಟ್‌ ಸಹಿಸುವಂತಹ ವಿಚಾರವಲ್ಲ. ನಮ್ಮ ಎಚ್‌ಸಿಎಲ್‌ಗೆ ಸಿಬ್ಬಂದಿ ಸೇರಿದ್ದಾರೆ ಎಂದರೆ ಅವರು ನಮ್ಮ ಕಂಪನಿಯೊಂದಿಗೆ ಸ್ಪರ್ಧಿಸದೆ, ಸಂಪೂರ್ಣ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ ಎಂದರ್ಥ. ನಮ್ಮ ಕಂಪನಿಯಲ್ಲಿ ಮೂನ್‌ಲೈಟ್‌ ಎನ್ನುವುದು ಅತಂಹ ದೊಡ್ಡ ಸಮಸ್ಯೆ ಆಗಿಲ್ಲ’ ಎಂದು ಎಚ್‌ಸಿಎಲ್‌ನ ಮುಖ್ಯ ಅಧಿಕಾರಿ ರಾಮಚಂದ್ರನ್‌ ಸುಂದರರಾಜನ್‌ ತಿಳಿಸಿದ್ದಾರೆ.

ಇದೇ ವೇಳೆ ಇನ್ಫೋಸಿಸ್‌ನಲ್ಲಿ ಕಳೆದ 12 ತಿಂಗಳುಗಳಿಂದ ಪರಿಶೀಲನೆ ನಡೆಸಿ, ಎರಡು ಕಂಪನಿಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ಕೈ ಬಿಟ್ಟಿರುವುದಾಗಿ ಇನ್ಫೋಸಿಸ್‌ನ ಕಾರ್ಯನಿರ್ವಾಹಕ ಅಧಿಕಾರಿ ಸಲೀಲ್‌ ಪರೇಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next