Advertisement

ಗೋಡ್ಸೆ ಹೇಳಿಕೆ: ಕಮಲ ಹಾಸನ್‌ಗೆ ಹೈಕೋರ್ಟ್‌ ತರಾಟೆ, ನಿರೀಕ್ಷಣಾ ಜಾಮೀನು ಮಂಜೂರು

09:09 AM May 21, 2019 | Sathish malya |

ಮಧುರೆ : ‘ಗಾಂಧಿಯನ್ನು ಕೊಂದಿದ್ದ ನಾಥೂರಾಮ್‌ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ, ರಾಜಕಾರಣಿ ಕಮಲ ಹಾಸನ್‌ ಗೆ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿರುವ ಮದ್ರಾಸ್‌ ಹೈಕೋರ್ಟ್‌, ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

Advertisement

ಕ್ರಿಮಿನಲ್‌ ವ್ಯಕ್ತಿಯನ್ನು ಧರ್ಮ, ಜಾತಿ ಅಥವಾ ಜನಾಂಗದೊಂದಿಗೆ ಗುರುತಿಸುವುದರಿಂದ ಜನರಲ್ಲಿ ದ್ವೇಷವನ್ನು ಬಿತ್ತಿದಂತಾಗುತ್ತದೆ ಎಂಬ ಎಚ್ಚರಿಕೆಯನ್ನು ಹೈಕೋರ್ಟ್‌ ಕಮಲ ಹಾಸನ್‌ ಗೆ ನೀಡಿತು.

‘ದ್ವೇಷದ ಕಿಡಿ ಹೊತ್ತಿಸುವ ಭಾಷಣಗಳನ್ನು ಮಾಡುವುದು ಈಚಿನ ದಿನಗಳಲ್ಲಿ ಒಂದು ಚಾಳಿಯಾಗಿ ಬಿಟ್ಟಿದೆ’ ಎಂದ ಮದ್ರಾಸ್‌ ಹೈಕೋರ್ಟಿನ ಮಧುರೆ ಪೀಠದ ಜಸ್ಟಿಸ್‌ ಆರ್‌ ಪುಗಲೇಂಧಿ ಅವರು, ‘ಬೆಂಕಿಯ ಒಂದು ಕಿಡಿ ದೀಪವನ್ನೂ ಬೆಳಗಬಹುದು, ಅರಣ್ಯವನ್ನೂ ಸುಟ್ಟು ನಾಶಮಾಡಬಹುದು’ ಎಂಬ ಎಚ್ಚರಿಕೆಯ ಮಾತು ಹೇಳಿದರು.

ಅರವಕುರಿಚ್ಚಿಯಲ್ಲಿ ಚುನಾವಣಾ ರಾಲಿಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಎಂಎನ್‌ಎಂ ಪಕ್ಷದ ಸ್ಥಾಪಕ ಕಮಲ ಹಾಸನ್‌ ಅವರು, ಗಾಂಧಿಯನ್ನು ಗುಂಡಿಕ್ಕಿ ಕೊಂದಿದ್ದ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ ಎಂದು ಹೇಳಿದ್ದರು. ತನ್ನ ಈ ವಿವಾದಾತ್ಮಕ ಹೇಳಿಕೆ ವಿರುದ್ಧ ಕೇಸುಗಳು ದಾಖಲಾದ ಹಿನ್ನೆಲೆಯಲ್ಲಿ ಕಮಲ ಹಾಸನ್‌ ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್‌ ಹೈಕೋರ್ಟ್‌ ಮೆಟ್ಟಲೇರಿದ್ದರು.

ಹಿಂದೂ ಮುನ್ನಾನಿ ಸಂಘಟನೆ ನೀಡಿದ್ದ ದೂರಿನ ಪ್ರಕಾರ ಕಮಲ ಹಾಸನ್‌ ವಿರುದ್ಧ ಕೇಸು ದಾಖಲಾಗಿತ್ತು. ಬಿಜೆಪಿ, ಎಐಎಡಿಎಂಕೆ ಮತ್ತು ಇತರ ಅನೇಕ ಹಿಂದೂ ಸಂಘಟನೆಗಳು ಕಮಲ ಹಾಸನ್‌ ಹೇಳಿಕೆಯನ್ನು ಖಂಡಿಸಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next