Advertisement
ನಮ್ಮ ಕಾಲೇಜ್ ಮ್ಯಾಗಜಿನ್ ಶಿಖರದ ಸಾಧನೆ ಏನೆಂದು ಕೇಳಿದ್ರೆ ಮೊದಲ ಬಾರಿ ವಿಶ್ವವಿದ್ಯಾನಿಲಯ ನಡೆಸುವ ಅಂತರ್‌ಕಾಲೇಜು ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು ನಂತರ ಸತತ ಮೂರು ವರ್ಷಗಳ ಕಾಲ ಪ್ರಥಮ ಸ್ಥಾನ ಪಡೆದಿರುವುದು ಎಂದು ಇದನ್ನು ಮಾತ್ರ ಹೇಳಿದರೆ ಖಂಡಿತ ತಪ್ಪಾಗುತ್ತದೆ. ಯಾಕೆಂದರೆ, ನಮ್ಮ ಮ್ಯಾಗಜಿನ್ ಶಿಖರದ ಸಾಧನೆ ಬರಿ ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ಸತತ ಮೂರು ವರ್ಷಗಳಿಂದ ಮೊದಲನೆಯ ಬಹುಮಾನ ಪಡೆಯುತ್ತಿರುವುದು ಮಾತ್ರ ಅಲ್ಲ. ಕಳೆದ ಎಂಟು ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಅದೆಷ್ಟೋ ಯುವ ಬರಹಗಾರರನ್ನು ಸೃಷ್ಟಿಸಿರುವುದು, ಸಾಹಿತ್ಯದ ಗಂಧ-ಗಾಳಿಯ ಪರಿಚಯವೇ ಇಲ್ಲದ ಕೆಲ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಯನ್ನು ಹುಟ್ಟು ಹಾಕಿರುವುದು, ಬರೆಯುವ ಆಸೆಯಿದ್ದರೂ ಸರಿಯಾದ ವೇದಿಕೆ ಸಿಗದೆ ಪರಿತಪಿಸುತ್ತಿದ್ದ ವಿದ್ಯಾರ್ಥಿಗಳಿಗೆ ಅದ್ಭುತವಾದ ವೇದಿಕೆಯನ್ನು ಕಲ್ಪಿಸಿಕೊಟ್ಟಿರುವುದು, ತೆರೆಮರೆಯಲ್ಲಿದ್ದ ಬರಹಗಾರರನ್ನು ಮುಖ್ಯವಾಹಿನಿಗೆ ಕರೆ ತಂದಿರುವುದು, ಡೆಸ್ಕ್ ಕವಿಗಳನ್ನು (ಬೆಂಚು ಡೆಸ್ಕ್ಗಳ ಮೇಲೆ ಕವಿತೆಗಳನ್ನು ಬರೆಯುವವರು) ಮ್ಯಾಗಜಿನ್‌ಗೆ ಬರೆಯುವಂತೆ ಮಾಡಿ, ಎಲ್ಲರೂ ಗುರುತಿಸುವಂತೆ ಮಾಡಿರುವುದು, ಸಾಹಿತ್ಯಾಸಕ್ತ ವಿದ್ಯಾರ್ಥಿಗಳ ಬರವಣಿಗೆಯ ಕನಸಿಗೆ ಬಣ್ಣ ಕೊಡುತ್ತಿರುವುದು, ಸಾಹಿತ್ಯ ಪ್ರೇಮಿಯ ಸಂಭ್ರಮಕ್ಕೆ ಕಾರಣವಾಗಿರುವುದು, ಇನ್ನು ಹೇಳುತ್ತಾ ಹೋದರೆ ಅದೆಷ್ಟೋ.
Related Articles
Advertisement