Advertisement

Hate speech; ಅಸ್ಸಾಂ ಸಿಎಂ ವಿರುದ್ಧ ಆಯೋಗಕ್ಕೆ ಇಂಡಿಯಾ ಕೂಟ ದೂರು

01:14 AM Nov 04, 2024 | Team Udayavani |

ರಾಂಚಿ: ಝಾರ್ಖಂಡ್‌ನ‌ಲ್ಲಿ ಚುನಾವಣ ಪ್ರಚಾರದ ವೇಳೆ ಅಸ್ಸಾಂ ಸಿಎಂ ಹಾಗೂ ಬಿಜೆಪಿ ಉಸ್ತುವಾರಿ ಹಿಮಂತ ಬಿಸ್ವಾ ಶರ್ಮಾ ದ್ವೇಷ ಭಾಷಣ ಮಾಡಿದ್ದಾರೆ ಎಂದು ಇಂಡಿಯಾ ಕೂಟ ಚುನಾವಣ ಆಯೋಗಕ್ಕೆ ದೂರು ನೀಡಿದೆ.

Advertisement

ಶರ್ಮಾ ಅವರು ಮುಸ್ಲಿಮರನ್ನು ಗುರಿಯಾಗಿಸಿ ವಿಷ ಬಿತ್ತುವ ಭಾಷಣ ಮಾಡಿದ್ದು, ಇದು ಆಂತರಿಕ ಯುದ್ಧಕ್ಕೆ ಕಾರಣವಾಗಬಹುದು ಎಂದು ಆರೋಪಿಸಿದೆ. ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಹಿಮಂತ, “ಒಳನುಸುಳುಕೋರರ ಬಗ್ಗೆ ಮಾತನಾಡು ವುದು ತಪ್ಪೇ? ಅವರಿಗೆ ನಾವು ಬಾಗಿಲು ತೆರೆಯ ಬೇಕೆ? ಎಂದು ಪ್ರಶ್ನಿಸಿದ್ದಾರೆ. “ಆ ಒಂದು ಸಮುದಾ ಯ ಒಂದೇ ಪಕ್ಷಕ್ಕೆ ಮತ ನೀಡುತ್ತದೆ. ನಮ್ಮ ಹಿಂದೂ ಗಳ ಮತವೇ ಎಲ್ಲೆಡೆ ಚದುರಿಹೋಗುತ್ತದೆ. ಈ ಪ್ರತ್ಯೇಕ ಸಮುದಾಯದ ಮತಕ್ಕಾಗಿ ಸರಕಾರವೂ ನುಸುಳುಕೋರರನ್ನು ಕರೆಯುತ್ತದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next