Advertisement
ಈ ವೇಳೆ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ತಂಡದ ಮೇಲೆ ದೂರುಗಳ ಸುರಿಮಳೆ ಸುರಿಸಿದ ನಿಯೋಗದವರು, ನೇಕಾರರು, ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಸಮಾವೇಶಗಳನ್ನು ಮಾಡುವ ಮೂಲಕ ಪಕ್ಷ ಸಂಘಟನೆ ನಡೆಸುವ ಯೋಚನೆ ಇದೆ. ಸಮಯಾವಕಾಶ ಕೊಟ್ಟರೆ ದಿಲ್ಲಿಗೆ ಬಂದು ವಿವರಣೆ ನೀಡುವುದಾಗಿ ಮನವಿ ಮಾಡಿದರಲ್ಲದೆ, ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರನ್ನು ಬದಲಿಸದಂತೆಯೂ ಒತ್ತಡ ಹಾಕಿದ್ದಾರೆ.
ಸುದ್ದಿಗಾರರಿಗೆ ಈ ಬಗ್ಗೆ ವಿವರಣೆ ನೀಡಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಪ್ರತಿಯೊಂದು ವಿಚಾರವೂ ತಮ್ಮ ಗಮನದಲ್ಲಿದೆ. ಆದರೂ ನೀವು ಹೇಳಿದ ವಿಚಾರವನ್ನು ಗಮನಕ್ಕೆ ತೆಗೆದುಕೊಳ್ಳುತ್ತೇನೆ. ಸಂಘಟನೆಯಲ್ಲಿ ಕೆಲಸ ಮಾಡಿ. ಬೂತ್ ಮಟ್ಟದಲ್ಲಿ ಬೂತ್ ಸಮಿತಿ, ಉಸ್ತುವಾರಿಗಳ ರಚನೆಗೆ ಸಹಯೋಗ ಕೊಡಿ ಎಂದಿದ್ದಾರೆ. ಚುರುಕಾಗಿ ಸಂಘಟನೆಯಲ್ಲಿ ಭಾಗವಹಿಸಲು ಸೂಚನೆ ಕೊಟ್ಟಿದ್ದಾರೆ ಎಂದರು. ಕೇಂದ್ರ ನಾಯಕರು ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ನಾವ್ಯಾರೂ ನೇಮಿಸಿದ್ದಲ್ಲ. ಮುಂದಿನ ಚುನಾವಣೆವರೆಗೆ ಅವರೇ ಮುಂದುವರಿಯಬೇಕು ಎಂಬ ಭಾವನೆ ನಮ್ಮಲ್ಲಿದೆ. ವಿಜಯೇಂದ್ರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ವಾಲ್ಮೀಕಿ ಹಗರಣ, ಬಳ್ಳಾರಿ ಆಸ್ಪತ್ರೆ ಪ್ರಕರಣ ಸೇರಿದಂತೆ ರಾಜ್ಯದ ಸರಕಾರದ ವೈಫಲ್ಯಗಳ ವಿರುದ್ಧದ ಹೋರಾಟ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಯಾವುದೇ ಪ್ರಕ್ರಿಯೆ ನೀಡುವುದಿಲ್ಲ
ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರನ್ನು ಬಿ.ವೈ.ವಿಜಯೇಂದ್ರ ಬಣದವರು ಭೇಟಿಯಾದ ಬಗ್ಗೆ ಯಾವುದೇ ಪ್ರಕ್ರಿಯೆ ನೀಡುವುದಿಲ್ಲ. ನಾನು ಹೈಕಮಾಂಡ್ ಭೇಟಿಯಾಗಿ ಎಲ್ಲ ವಿಷಯ ಮಾತಾ ಡಿದ್ದೇನೆ. ಅವರು ಏನು ಬೇಕಾದರೂ ಹೇಳಿಕೊಳ್ಳಲಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.