Advertisement

ಆಪ್ತನ ಪತ್ನಿ ಹೆಸರಲ್ಲಿ ಸೊನಾಲಿ ಬಾಡಿಗೆ ಮನೆ!

07:20 PM Aug 27, 2022 | Team Udayavani |

ಪಣಜಿ: ಹರ್ಯಾಣದ ಬಿಜೆಪಿ ನಾಯಕಿ ಸೊನಾಲಿ ಫೋಗಟ್‌ ಅವರ ಸಾವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸೊನಾಲಿ ಅವರ ತಮ್ಮ ಆಪ್ತ ಸುಧೀರ್‌ ಅವರ ಪತ್ನಿ ಹೆಸರಿನಲ್ಲಿ ಫ್ಲ್ಯಾಟ್‌ ಒಂದನ್ನು ಬಾಡಿಗೆ ಪಡೆದಿದ್ದರು ಎನ್ನುವ ವಿಚಾರ ಈಗ ಹೊರಬಿದ್ದಿದೆ.

Advertisement

ಗುರುಗ್ರಾಮದ ಸೆಕ್ಟರ್‌ 102ರಲ್ಲಿ ಕೃಷ್ಣಕಾಂತ್‌ ತಿವಾರಿ ಎಂಬವರಿಗೆ ಸೇರಿರುವ ಫ್ಲ್ಯಾಟ್‌ ಅನ್ನು ಸುಧೀರ್‌ ಪತ್ನಿ ಹೆಸರಿನಲ್ಲಿ ಸೊನಾಲಿ ಬಾಡಿಗೆ ಪಡೆದಿದ್ದರು. ಆಗಾಗ ಫ್ಲ್ಯಾಟ್‌ಗೆ ಹೋಗುತ್ತಿದ್ದರು. ಗೋವಾಕ್ಕೆ ತೆರಳುವ ಮುನ್ನವೂ ಇದೇ ಫ್ಲ್ಯಾಟ್‌ನಲ್ಲಿದ್ದು, ಅಲ್ಲಿಂದಲೇ ಏರ್‌ಪೋರ್ಟ್‌ಗೆ ಕ್ಯಾಬ್‌ ಬುಕ್‌ ಮಾಡಿಕೊಂಡು ಹೋಗಿದ್ದರು ಎನ್ನುವ ವಿಚಾರ ತಿಳಿದುಬಂದಿದೆ.

ಸೊನಾಲಿ ಮತ್ತು ಅವರ ಇಬ್ಬರು ಸಹಚರರು ಪಾರ್ಟಿ ಮಾಡಿದ್ದಂತಹ ಬಾರ್‌ನ ಮಾಲೀಕ ಹಾಗೂ ಡ್ರಗ್ಸ್‌ ಡೀಲರ್‌ ಒಬ್ಬನನ್ನು ಗೋವಾ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಮಾಲೀಕ ಎಡ್ವಿನ್‌ ನ್ಯೂನ್ಸ್‌ ಹಾಗೂ ಡೀಲರ್‌ ದತ್ತಪ್ರಸಾದ್‌ ಗಾಂವ್ಕರ್‌ ವಿರುದ್ಧವೂ ಡ್ರಗ್ಸ್‌ ಕೇಸ್‌ ದಾಖಲಾಗಿದೆ. ಈ ಹಿಂದೆ ಬಂಧಿತರಾಗಿದ್ದ ಸೊನಾಲಿ ಸಹಚರರಾದ ಸುಧೀರ್‌ ಸಂಗ್ವಾನ್‌ ಮತ್ತು ಸುಖ್ವೀಂದರ್‌ ಸಿಂಗ್‌ರನ್ನು ಗೋವಾದ ಕೋರ್ಟ್‌ 10 ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next