Advertisement

“ಎ’ಟೆಸ್ಟ್‌: ಹನುಮ ವಿಹಾರಿ ಶತಕ ವಿಹಾರ

08:36 AM Aug 11, 2018 | |

ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ “ಎ’ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದ ಮೊದಲ ದಿನ ಹನುಮ ವಿಹಾರಿ ಅಜೇಯ ಶತಕ ಬಾರಿಸಿ ಭಾರತ “ಎ’ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾಗಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ 4 ವಿಕೆಟಿಗೆ 322 ರನ್‌ ಪೇರಿಸಿದ್ದು, ಇದರಲ್ಲಿ ವಿಹಾರಿ ಪಾಲು ಅಜೇಯ 138 ರನ್‌.

Advertisement

ಆರಂಭಿಕ ಆಘಾತ
ಮೊದಲ ಪಂದ್ಯದಲ್ಲಿ ಅಮೋಘ ದ್ವಿಶತಕ ಬಾರಿಸಿದ ಮಾಯಾಂಕ್‌ ಅಗರ್ವಾಲ್‌ ಈ ಸಲ ಖಾತೆ ತೆರೆಯುವ ಮೊದಲೇ ನಿರ್ಗಮಿಸಿ ನಿರಾಸೆ ಮೂಡಿಸಿದರು. ಆಗ ಭಾರತ ಕೇವಲ ಒಂದು ರನ್‌ ಮಾಡಿತ್ತು. ಪೃಥ್ವಿ ಶಾ ಕೇವಲ 16 ರನ್ನಿಗೆ ಔಟಾದರು. 18 ರನ್‌ ಆಗುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್‌ ಸೇರಿದ್ದರು. ಈ ಸಂದರ್ಭದಲ್ಲಿ ಹನುಮ ವಿಹಾರಿ ತಂಡದ ನೆರವಿಗೆ ನಿಂತರು. ಅವರಿಗೆ ನಾಯಕ ಶ್ರೇಯಸ್‌ ಅಯ್ಯರ್‌ (39), ಅಂಕಿತ್‌ ಬವೆ° (80) ಉತ್ತಮ ಬೆಂಬಲ ನೀಡಿದರು. ವಿಹಾರಿ ಜತೆ 30 ರನ್‌ ಮಾಡಿರುವ ಕೀಪರ್‌ ಕೆ.ಎಸ್‌. ಭರತ್‌ ಕ್ರೀಸಿನಲ್ಲಿದ್ದಾರೆ.

ಅತ್ಯಂತ ಜವಾಬ್ದಾರಿಯುತ ಆಟವಾಡಿದ ಹನುಮ ವಿಹಾರಿ 273 ಎಸೆತಗಳನ್ನು ನಿಭಾಯಿಸಿದ್ದು, 13 ಬೌಂಡರಿ ಹೊಡೆದಿದ್ದಾರೆ. ಬವೆ° ಅವರ 80 ರನ್‌ 146 ಎಸೆತಗಳಿಂದ ಬಂತು (10 ಬೌಂಡರಿ, 1 ಸಿಕ್ಸರ್‌). ಇವರಿಬ್ಬರ 4ನೇ ವಿಕೆಟ್‌ ಜತೆಯಾಟದಲ್ಲಿ 177 ರನ್‌ ಸಂಗ್ರಹಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next