Advertisement
ಉಡುಪಿ: ಇತ್ತೀಚೆಗೆ ಕೆಲವು ದಿನಗಳಿಂದ ನಮ್ಮ ಸಂಪರ್ಕದಲ್ಲಿರುವವರಿಗೆ ಮೊಬೈಲ್ ಮೂಲಕ ಕರೆ ಮಾಡಿದ ಕೂಡಲೇ ಅವರು ಕರೆ ತೆಗೆದು ಕೊಳ್ಳುವವರೆಗೂ ಒಂದು ಸಂದೇಶ ಕೇಳುತ್ತಿರುತ್ತದೆ. ನೀವೂ ಕೇಳಿರಬಹುದು. “ಸಾಮಾಜಿಕ ಮಾಧ್ಯಮಗಳ ಸಂದೇಶಕ್ಕೋ, ಸಲಹೆಗೋ ಓಗೊಟ್ಟು ಹೂಡಿಕೆ ಮಾಡಬೇಡಿ. ಅಂಥದ್ದೇನಿದ್ದರೂ 1930ಕ್ಕೆ ಕರೆ ಮಾಡಿ ತಿಳಿಸಿ. ಇದು ಗೃಹ ಸಚಿವಾಲಯದ ಪ್ರಕಟನೆ’.
ಪೊಲೀಸ್ ಇಲಾಖೆಗಳ ಅಂಕಿಅಂಶಗಳ ಪ್ರಕಾರ ಸದ್ಯ ಆ ಸ್ಥಿತಿಯನ್ನು ತಲುಪಿಲ್ಲ. ಆದರೆ ಅಪಾಯಕಾರಿ ಸ್ಥಿತಿಯ ಹತ್ತಿರದಲ್ಲಿದ್ದೇವೆ. ವಿಚಿತ್ರ ಹಾಗೂ ಆಘಾತಕಾರಿ ಸಂಗತಿಯೆಂದರೆ ನಂಬಲರ್ಹ ಮೂಲಗಳ ಪ್ರಕಾರ ದೇಶದ ವಿವಿಧ ಸೈಬರ್ ಕ್ರೈಂ ಪೊಲೀಸ್ ಠಾಣೆ (ಸೆನ್) ಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳಿಗಿಂತ ಹೆಚ್ಚು ದಾಖಲಾಗುತ್ತಿಲ್ಲ. ಸೈಬರ್ ವಂಚಕರ ಗಾಳಕ್ಕೆ ಸಿಕ್ಕಿದವರು ತಮ್ಮ ಮರ್ಯಾದೆ ಹೋಗುತ್ತದೆಂದೋ, ತಮ್ಮ ಅಜ್ಞಾನ ಪ್ರದರ್ಶನವಾಗುತ್ತದೆಂದೋ ಬಹಿರಂಗಪಡಿಸುತ್ತಿಲ್ಲ. ತೀರಾ ಹೆಚ್ಚು ಮೊತ್ತ ಕಳೆದುಕೊಂಡವರು, ಇಕ್ಕಟ್ಟಿಗೆ ಸಿಲುಕಿಕೊಂಡವರು ಮಾತ್ರ ಠಾಣೆಗಳಿಗೆ ದೂರು ನೀಡು ತ್ತಿದ್ದಾರೆ. ಹಾಗಾಗಿ ಅಂಕಿಅಂಶಗಳೂ ಉಳಿದ ಅಪರಾಧಗಳಿಗೆ ಹೋಲಿಸಿದರೆ ಕಡಿಮೆ ಎನಿಸಬಹುದು. ವಾಸ್ತವವಾಗಿ ಈಗ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಎಂಬುದು ಪೊಲೀಸ್ ಅಧಿಕಾರಿಗಳ ಅಭಿಪ್ರಾಯ. ಹಾಗಾಗಿಯೇ ಕೇಂದ್ರ ಗೃಹ ಇಲಾಖೆಯು ಮೇಲಿನ ಸಂದೇಶದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ನಿಮ್ಮ ಯಾವುದೇ ದೂರಿದ್ದರೂ 1930ಕ್ಕೆ ನೀಡಬಹುದು. ಅದು ರಾಷ್ಟ್ರೀಯ ಸೈಬರ್ ಅಪರಾಧಗಳ ಹೆಲ್ಪ್ ಲೈನ್ ಸಂಖ್ಯೆ.
Related Articles
ಸೈಬರ್ ಕ್ರೈಂ ಕುರಿತ ಜಾಗೃತಿ ವಿಚಾರ ಸಂಕಿರಣದಲ್ಲಿ ಪರಿಣಿತರೊಬ್ಬರು ಹೇಳಿದಂತೆ,ಭಾರತದಲ್ಲಿ ನಾಗರಿಕರು ಪ್ರತಿನಿಮಿಷಕ್ಕೆ 1.3 ರಿಂದ 1.5 ಲಕ್ಷ ರೂ.ಗಳನ್ನು ಸೈಬರ್ ವಂಚನೆಯಿಂದ ಕಳೆದುಕೊಳ್ಳುತ್ತಿದ್ದಾರೆ. ಆದರೆ ಇಂಥ ಪ್ರಕರಣಗಳಲ್ಲಿ ವಾಪಸು ಮರಳಿ ಪಡೆಯುವ (ರಿಕವರಿಂಗ್) ಪ್ರಮಾಣ ಎಷ್ಟು ಗೊತ್ತೇ? ಶೇ. 20 ಕ್ಕಿಂತಲೂ ಕಡಿಮೆ.
Advertisement
-ಯಾವುದೇ ಕರೆ ಬರಲಿ, ಸಂದೇಶಬರಲಿ. ಅದಕ್ಕೆ ಉತ್ತರಿಸುವ ಮೊದಲು ಇದು ನಮಗೆ ಸಂಬಂಧಿಸಿದ್ದೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ.-ಆ ಕರೆಯಲ್ಲಿ ಇರುವವರು ನಿಮ್ಮ ಪರಿಚಿತರಂತೆಯೇ ಮಾತನಾಡಬಹುದು, ನಿಮ್ಮ ಭಾಷೆಯೇ ಮಾತನಾಡಬಹುದು. ಆದರೆ ಅವರು ನಿಮಗೆ ಪರಿಚಿತರಲ್ಲ ಎಂಬುದು ನೆನಪಿನಲ್ಲಿರಲಿ.
-ನಿಮಗೆ ಸಂಬಂಧಿಸದ, ಪರಿಚಯವಲ್ಲದ ಕರೆಯಾಗಿದ್ದರೆ, ವಿಷಯವಾಗಿದ್ದರೆ ಉತ್ತರಿಸಲು ಹೋಗಲೇಬೇಡಿ.
-ಯಾವುದೇ ಸಂದೇಶ ಅಪರಿಚಿತರಿಂದ ಬರಲಿ, ಯಾವುದೇ ಗುಂಪಿನಲ್ಲಿ ಕಾಣಲಿ. ಕುತೂಹಲಕ್ಕೆಂದು ಒತ್ತಬೇಡಿ. ನಮ್ಮ ಕುತೂಹಲವೇ ಅವರ ಗಾಳಕ್ಕೆ ಸಿಕ್ಕಿದ ಮೀನು. ಹೀಗೂ ಆಗಬಹುದು.
ಒಂದು ಬೆಳಗ್ಗೆ ಟೆಲಿಕಾಂ ಸಂಸ್ಥೆಯಿಂದ ಕರೆ ಬಂದಿತ್ತು. ನಿಮಗೊಂದು ವಿದೇಶದಿಂದ ಪಾರ್ಸೆಲ್ ಬಂದಿದೆ. ಅದರಲ್ಲಿ ಡ್ರಗ್ಸ್ ಹಾಗೂ ಇತರ ಮಾದಕ ವಸ್ತುಗಳಿವೆ. ನೀವು ನಿಮ್ಮ ಖಾತೆಯಿಂದ ಇಷ್ಟು ಹಣವನ್ನು ಕಸ್ಟಂ ಅಧಿಕಾರಿಗಳಿಗೆ ಪಾವತಿ ಮಾಡಬೇಕು ಎಂದು ರೆಕಾರ್ಡ್ ಆಡಿಯೋ ಕೇಳಿಸಿ, ಮುಂದುವರಿಯಲು ಒಂದನ್ನು ಕ್ಲಿಕ್ ಮಾಡಬೇಕು ಎಂದಂತೆ ಮುಂದಿನ ಸೂಚನೆ ಪಾಲಿಸುತ್ತಾ ಮುಂದೆ ಒಟಿಪಿ ಬಂದು, ಅದನ್ನು ಅವರೊಂದಿಗೆ ಶೇರ್ ಮಾಡಿಕೊಂಡ ಕೂಡಲೇ ಕಾಲ್ ಕಟ್ ಆಗಿ ಮರು ಕ್ಷಣದಲ್ಲೇ ಖಾತೆಯಲ್ಲಿದ್ದ 28 ಸಾವಿರ ರೂ. ಕಡಿತಗೊಂಡಿತ್ತು. ಬ್ಯಾಂಕ್ ಹೋಗಿ ಕೇಳಿದರೆ ಮೋಸ ಹೋಗಿರುವುದು ಅರಿವಾಯಿತು. ಆ ಸಂಖ್ಯೆಗೆ ಕರೆ ಮಾಡಿದರೆ ಕರೆ ಹೋಗುವುದಿಲ್ಲ. ಪೊಲೀಸರಿಗೆ ದೂರು ನೀಡಿದರೂ ದುಡ್ಡು ಸಿಗಲಿಲ್ಲ ಎನ್ನುತ್ತಾರೆ ಉಡುಪಿಯ ನೊಂದ ಮಹಿಳೆಯೊಬ್ಬರು. ಹೋದ ಹಣ ಹೋದ ಹಾಗೆ, ಎಚ್ಚರ ವಹಿಸಿ
ನಮ್ಮ ಖಾತೆಯಿಂದ ವಂಚಕರಿಗೆ ಹಣ ವರ್ಗಾವಣೆ ಆದ ಅನಂತರದಲ್ಲಿ ಅಥವಾ ಅವರೇ ನಮ್ಮ ಖಾತೆಯ ಮಾಹಿತಿ ಪಡೆದು ಹಣ ವರ್ಗಾವಣೆ ಮಾಡಿಕೊಂಡ ಬಳಿಕ ಪುನಃ ಅದನ್ನು ವಾಪಸ್ ಪಡೆಯುವುದು ಬಹಳ ಕಷ್ಟ. ಸಿಕ್ಕರೂ ಅಲ್ಪ ಮಾತ್ರ. ಪೊಲೀಸರು ಖದೀಮರ ಬೆನ್ನಟ್ಟಿ ಹೊರಟರೂ ಖದೀಮರ ಮೂಲ ಸ್ಥಾನ ತಲುಪುವುದರೊಳಗೆ ಆ ವಿಳಾಸ ದಲ್ಲಿ ಅವರು ಇರುವುದೇ ಇಲ್ಲ. ಬ್ಯಾಂಕ್ ಖಾತೆಯ ಮೂಲಕ ಪತ್ತೆ ಹಚ್ಚುವುದೂ ಕಷ್ಟ. ಹೀಗಾಗಿ ಹಣ ವರ್ಗಾಯಿಸುವ ಮೊದಲು ಎಚ್ಚರ ವಹಿಸುವುದೇ ಸೂಕ್ತ.