ಮಂಗಳೂರು: ಈ ಸೀಸನ್‌ನ ಬಿಗ್‌ಬಾಸ್ (Bigg Boss) ರಿಯಾಲಿಟಿ ಶೋದ (Reality Show) ಅಸೋಸಿಯೇಟ್ ಪಾರ್ಟ್ ನರ್ ಆಗಿ ಹಾಂಗ್ಯೋ ಐಸ್ ಕ್ರೀಂ (Hangyo Ice Cream) ಆಯ್ಕೆಗೊಂಡಿದೆ. ಸೆ.29ರಿಂದ ಕಲರ್ಸ್ ಕನ್ನಡದಲ್ಲಿಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್-11 (Season-11) ಆರಂಭಗೊಳ್ಳುತ್ತಿದ್ದು, ಕಿಚ್ಚ ಸುದೀಪ್ (KicchaSudeepa) ನಡೆಸಿಕೊಡುವರು.
ಕಳೆದ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗ ಳೂರು (Royal Challengers Bengaluru) ತಂಡದ ಅಧಿಕೃತ ಐಸ್‌ಕ್ರೀಂ ಪಾಲುದಾರರಾಗಿದ್ದ ಹಾಂಗ್ಯೋ, ತನ್ನ ಬ್ರಾಂಡ್ ಗುರುತನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.
ಮೊದಲ ಬಾರಿಗೆ ತನ್ನ ಪ್ರೀಮಿಯಂ ಟ್ರೀಟ್ ಐಸ್‌ಕ್ರೀಂಗಳನ್ನು ಬಿಗ್ ಬಾಸ್ ಮನೆಯೊಳಗೆ ತರುತ್ತಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಹಾಂಗ್ಯೋ ಐಸ್ ಕ್ರೀಂ ಫ್ರೀಜರ್ ಇರಿಸಲಾಗುವುದು, ಅದರೊಳಗೆ ವಿಶಿಷ್ಠ ಶ್ರೇಣಿಯ ಐಸ್ ಕ್ರೀಂ ಇರುತ್ತದೆ. ಶೋ ವೇಳೆಯ ಯಾವುದೇ ಸವಾಲಿನ ಗೆಲುವನ್ನು ಐಸ್ ಕ್ರೀಂ ಜತೆ ಸವಿಯಬಹುದು.
ಇದರ ಕುರಿತು ಮಾತನಾಡಿದ ಹಾಂಗ್ಯೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಜಿ. ಪೈ, ಹಾಂಗ್ಯೋ ಐಸ್ ಕ್ರೀಂ ಖುಷಿಯನ್ನು ಪ್ರತಿನಿಧಿಸುತ್ತದೆ. ಈ ಸಹಯೋಗದ ಮೂಲಕ ನಾವು ಬಿಗ್‌ಬಾಸ್ ಮನೆಯೊಳಗೆ ಖುಷಿ ಹಂಚುವ ಕೆಲಸ ಮಾಡಲಿದ್ದೇವೆ. ಸ್ಪರ್ಧಿಗಳು ಐಸ್ ಕ್ರೀಂ ಸವಿ ಯುತ್ತಾ ಪಡುವ ಖುಷಿಯನ್ನು ನೋಡುಗ ರೊಂದಿಗೂ ಹಂಚಿಕೊಳ್ಳಲಿ ಎಂದು ಬಯಸುವುದಾಗಿ ತಿಳಿಸಿದ್ದಾರೆ.
ಮಂಗಳೂರು ಮೂಲದ ಸಂಸ್ಥೆ
ಮಂಗಳೂರು ಮೂಲದ ಮೊದಲ ಐಸ್ ಕ್ರೀಂ ಸಂಸ್ಥೆಯಾದ ಹ್ಯಾಂಗ್ಯೂ ಐಸ್‌ಕ್ರೀಂ ಅನ್ನು 1997ರಲ್ಲಿ ಸಹೋದರರಾದ ದಿನೇಶ್ ಪೈ, ಪ್ರದೀಪ್ ಪೈ ಮತ್ತು ಜಗದೀಶ್ ಪೈ ಸ್ಥಾಪಿಸಿದ್ದರು. ಈಗ ಭಾರತದ ಪ್ರಮುಖ ಐಸ್‌ಕ್ರೀಂ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ.