Advertisement
ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ 9 ವರ್ಷದಿಂದ ಮತ್ತು ಎಂ. ಪ್ರಂಡ್ಸ್ ಕಾರುಣ್ಯ ಸಂಸ್ಥೆ 7 ವರ್ಷದಿಂದ ಪ್ರತಿ ದಿನವೂ ಈ ಸೇವೆ ನೀಡುತ್ತಿವೆ. ಇವರಿಗೆ ಹಲವು ದಾನಿಗಳು ಬೆಂಬಲವಾಗಿ ನಿಂತಿದ್ದಾರೆ. ದಿನವೊಂದಕ್ಕೆ ಕನಿಷ್ಠ 500 ಮಂದಿ ಎಂದು ಲೆಕ್ಕ ಹಾಕಿದರೆ ತಿಂಗಳಿಗೆ 15 ಸಾವಿರ ಮಂದಿ ಇದರ ಲಾಭ ಪಡೆಯುತ್ತಾರೆ. ಅಂದರೆ ವರ್ಷಕ್ಕೆ 1.80 ಲಕ್ಷ ಮಂದಿ !
Related Articles
ಮಧ್ಯಾಹ್ನದ ಊಟವನ್ನು ಸ್ನೇಹಾ ಲಯ ಚಾರಿಟೇಬಲ್ ಟ್ರಸ್ಟ್ ನೀಡು ತ್ತಿದೆ. ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ನೀಡುವ ಊಟದಲ್ಲಿ ಅನ್ನ, ಸಾಂಬಾರು, ಉಪ್ಪಿನಕಾಯಿ ಇರುತ್ತದೆ. ಹೆಚ್ಚಾ ಕಡಿಮೆ 1 ದಿನಕ್ಕೆ ಸ್ನೇಹಾಲಯವು 21 ಸಾವಿರ ರೂ.ಗಳನ್ನು ಇದಕ್ಕಾಗಿ ವಿನಿಯೋಗಿಸುತ್ತಿದೆ. ದಾನಿಗಳ ಸಹಕಾರವೇ ನಮಗೆ ಆಧಾರ ಎನ್ನುತ್ತಾರೆ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಜೋಸೆಫ್ ಕ್ರಾಸ್ತಾ.
Advertisement
ಸಂಜೆ ಚಪಾತಿ ಗಸಿ, ಇಡ್ಲಿರಾತ್ರಿಯ ಊಟೋಪಚಾರದ ವ್ಯವಸ್ಥೆಯನ್ನು ಎಂ-ಫ್ರೆಂಡ್ಸ್ ಸಂಸ್ಥೆ ಕೈಗೆತ್ತಿಕೊಂಡಿದೆ. ವಾರದ 5 ದಿನ ಚಪಾತಿ, ಗಸಿ ಹಾಗೂ 2 ದಿನ ಇಡ್ಲಿ, ತೋವೆ ನೀಡಲಾಗುತ್ತದೆ. 1 ದಿನಕ್ಕೆ 7,500 ರೂ. ವಿನಿಯೋಗಿಸಲಾ ಗುತ್ತಿದೆ. ವಿಶೇಷ ದಿನಗಳಲ್ಲಿ ವಿಶೇಷ ಊಟವಿರುತ್ತದೆ. ಜತೆಗೆ ರೋಗಿಗಳಿಗೆ ಬೇಕಾದ ಇತರ ಸೇವೆಯನ್ನೂ ನೀಡುತ್ತದೆ ಎನ್ನುತ್ತಾರೆ ಎಂ
-ಫ್ರೆಂಡ್ಸ್ ಚಯರ್ಮ್ಯಾನ್ ಝಕಾರಿಯಾ ಜೋಕಟ್ಟೆ. ಮೊಮ್ಮಗನವರೆಗೂ ಅನ್ನದಾನ
ಹೊಸದಿಲ್ಲಿಯಲ್ಲಿ ಉದ್ಯಮಿಯಾಗಿರುವ ಸಾಸ್ತಾನದ ಜೋಸೆಫ್ ಮಿನೇಜಸ್ ಅವರು ಸ್ನೇಹಾಲಯ ಸಂಸ್ಥೆಗೆ ನೆರವು ನೀಡುತ್ತಿದ್ದಾರೆ. 15 ಸಾವಿರ ರೂ.ಗಳಿಂದ ಆರಂಭವಾದ ದೇಣಿಗೆ ಈಗ ತಿಂಗಳಿಗೆ 3ಲಕ್ಷಕ್ಕೆ ತಲುಪಿದೆ. ನಾನು ಮಾತ್ರವಲ್ಲ, ನನ್ನ ಮಗ, ಮೊಮ್ಮಗನ ಕಾಲದಲ್ಲೂ ಈ ಸೇವೆ ಮುಂದುವರಿಯುತ್ತದೆ ಎಂದು ಸ್ನೇಹಾಲಯಕ್ಕೆ ತಿಳಿಸಿದ್ದಾರೆ. ಕಳೆದ ಹಲವು ವರ್ಷ ದಿಂದ 2 ಸಂಘಟನೆ ಯವರು ಲಕ್ಷಾಂತರ ನೊಂದ ಮನಸುಗಳನ್ನು ಅರಳಿಸುವ ಕಾರ್ಯ ನಡೆಸಿದ್ದಾರೆ. ಹೊಸ ವರ್ಷದ ಘಳಿಗೆಯಲ್ಲಿ ಇಂತಹ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ
– ಡಾ|ಶಿವಪ್ರಕಾಶ್ ಡಿ.ಎಸ್. ಅಧೀಕ್ಷಕರು, ವೆನ್ಲಾಕ್