Advertisement

ಪಾಕ್‌ನಲ್ಲಿ 6 ವರ್ಷ ಜೈಲು ಶಿಕ್ಷೆ : ಭಾರತಕ್ಕೆ ಮರಳಿದ ಅನ್ಸಾರಿ

07:15 PM Dec 18, 2018 | udayavani editorial |

ಹೊಸದಿಲ್ಲಿ : ಪಾಕಿಸ್ಥಾನದ ತನ್ನ ಫೇಸ್‌ ಬುಕ್‌ ಗೆಳತಿಯನ್ನು ಕಾಣಲು ಅಲ್ಲಿಗೆ ಹೋಗಿ ಅಲ್ಲಿ ಬಂಧಿಯಾಗಿ ಆರು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿ ಇದೀಗ ಬಿಡುಗಡೆಗೊಂಡಿರುವ 33ರ ಹರೆಯದ ಮುಂಬಯಿ ನಿವಾಸಿ ಹಮೀದ್‌ ನಿಹಾಲ್‌ ಅನ್ಸಾರಿ ಇಂದು ಮಂಗಳವಾರ ಅಟಾರಿ-ವಾಗಾ ಗಡಿಯನ್ನು ದಾಟಿ ಸ್ವದೇಶಕ್ಕೆ ಮರಳಿದ್ದಾನೆ.

Advertisement

2012ರಲ್ಲಿ ಪಾಕ್‌ ಗುಪ್ತಚರ ದಳ ಬಂಧಿಸಿದ್ದ ಈತನನ್ನು ಪಾಕಿಸ್ಥಾನ ನಿನ್ನೆ ಸೋಮವಾರ ಬಿಡುಗಡೆಗೊಳಿಸಿತ್ತು. 

ಅನ್ಸಾರಿಯ ಹಾಗೆ ಪಾಕಿಸ್ಥಾನದಲ್ಲಿ ಜೈಲು ಶಿಕ್ಷೆಯ ಅವಧಿಯನ್ನುಮುಗಿಸಿರುವ ಇತರ ಭಾರತೀಯರನ್ನು ಕೂಡ ಪಾಕ್‌ ಸರಕಾರ ಬೇಗನೆ ಬಿಡುಗಡೆಗೊಳಿಸಲೆಂದು ಭಾರತ ಸರಕಾರ ಹಾರೈಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next