Advertisement
ಒಂದು ದಶಕದ ಹೋರಾಟದ ಫಲವಾಗಿ ಕೊನೆಗೂ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ್ತಿಲಲ್ಲಿ ರೈಲು ಬಂದು ನಿಲ್ಲಲು ವೇದಿಕೆ ಸಜ್ಜಾಗಿದೆ. ಇನ್ಮುಂದೆ ನಗರದ ಸಂಚಾರವ್ಯೂಹದಿಂದ ಹೊರಬಂದು, ಕೇವಲ 45 ನಿಮಿಷಗಳಲ್ಲಿ ಪ್ರಯಾಣಿಕರು ವಿಮಾನ ನಿಲ್ದಾಣತಲುಪುವ ದಿನಗಳು ದೂರ ಇಲ್ಲ. ಹೌದು, ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾಗುತ್ತಿರುವ ಹಾಲ್ಟ್ ಸ್ಟೇಷನ್ ಕಾಮಗಾರಿಅಕ್ಟೋಬರ್ ಮೊದಲ ವಾರದಲ್ಲಿ ಪೂರ್ಣಗೊಳ್ಳಲಿದ್ದು, ನಂತರ ಸಾರ್ವಜನಿಕ ಸೇವೆಗೂ ಮುಕ್ತವಾಗಲಿದೆ. ಇದರ ಬೆನ್ನಲ್ಲೇ ಉದ್ದೇಶಿತ ಸೌಲಭ್ಯವನ್ನು ದೂರದೃಷ್ಟಿಯಿಂದ ಸಮರ್ಪಕವಾಗಿ ಬಳಸಿಕೊಂಡರೆ, ರಸ್ತೆಗಳ ಮೇಲಿನ ವಾಹನಗಳ ಒತ್ತಡ ತಗ್ಗಿಸುವ ಮಾರ್ಗವಾಗಿಯೂ ರೂಪುಗೊಳ್ಳಲಿದೆ ಎಂಬ ಕೂಗುಕೇಳಿಬರುತ್ತಿದೆ. ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಹಲವು ಯೋಜನೆಗಳು ರೂಪುಗೊಳ್ಳುತ್ತಿವೆ. ಅನುಷ್ಠಾನಕ್ಕಾಗಿ ಸರ್ಕಾರ ಹಣದ ಹೊಳೆಹರಿಸುತ್ತಿದೆ. ಇದರ ಭಾಗವಾಗಿ ಯಲಹಂಕ-ದೇವನಹಳ್ಳಿ ನಡುವಿನ ಮಾರ್ಗವನ್ನು ಆದ್ಯತೆ ಮೇರೆಗೆ ವಿದ್ಯುದ್ದೀಕರಣಗೊಳಿಸುವ ತುರ್ತು ಇದೆ. ಆ ಮೂಲಕ ನಗರದ ನಾನಾ ಭಾಗಗಳು ಹಾಗೂ ಉಪನಗರಗಳಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ ಸಾಧ್ಯ. ಆಗ, ಸಮಯ ಉಳಿತಾಯದ ಜತೆಗೆ ದಟ್ಟಣೆಯೂ ತಗ್ಗಲಿದೆ. ನಗರ ವ್ಯಾಪ್ತಿಯಲ್ಲೇ ಸುಮಾರು50ಕ್ಕೂ ಅಧಿಕ ರೈಲು ನಿಲ್ದಾಣಗಳಿವೆ. ಜತೆಗೆ ಹೊಸೂರು, ತುಮಕೂರು, ರಾಮನಗರ, ಮೈಸೂರು, ಬಂಗಾರಪೇಟೆ ಸೇರಿದಂತೆ ಸುತ್ತಲಿನ ಪ್ರದೇಶಗಳೂ ವಿದ್ಯುದ್ದೀಕರಣಗೊಂಡ ರೈಲು ಮಾರ್ಗಗಳಿವೆ. ಪ್ರಯಾಣಿಕರ ಬೇಡಿಕೆ ಬಗ್ಗೆ ಸಮೀಕ್ಷೆ ನಡೆಸಿ, ಆಯ್ದ ಭಾಗಗಳಿಂದ ನೇರವಾಗಿವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಸಾಧ್ಯವಿದೆ. ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ.ಈನಿಟ್ಟಿನಲ್ಲಿ ನೈರುತ್ಯ ರೈಲ್ವೆ ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ಸಿಟಿಜನ್ ಫಾರ್ ಸಿಟಿಜನ್ ಸಂಚಾಲಕ ರಾಜಕುಮಾರ್ ದುಗರ್ ಅಭಿಪ್ರಾಯಪಡುತ್ತಾರೆ.
Related Articles
Advertisement
ಫ್ರೀಕ್ವೆನ್ಸಿ ಹೆಚ್ಚಲು ಆಗಬೇಕು ಅಪ್‌ಗ್ರೇಡ್ : ಪ್ರಯಾಣಿಕರು ಮತ್ತು ಬಿಐಎಎಲ್ ಸಿಬ್ಬಂದಿಗೆ ಸಂಪೂರ್ಣ ಸೇವೆ ಲಭ್ಯವಾಗಲು ಹೆಚ್ಚು ರೈಲುಗಳ ಅವಶ್ಯಕತೆ ಇದೆ. ಇದಕ್ಕಾಗಿಯಾದರೂ ಮಾರ್ಗ ವಿದ್ಯುದ್ದೀಕರಣ ತ್ವರಿತವಾಗಿ ಆಗಲೇಬೇಕು. ಯಾಕೆಂದರೆ, ಒಂದು ರೈಲಿನಲ್ಲಿ ಉದಾಹರಣೆಗೆ ಎರಡು ಸಾವಿರ ಜನ ಸಂಚರಿಸಬಹುದು ಅಂದುಕೊಳ್ಳೋಣ. ಆದರೆ, ಹೆಚ್ಚು-ಕಡಿಮೆ ಒಂದೇ ಸಮಯಕ್ಕೆ ಇದಕ್ಕಿಂತ ಅಧಿಕ ಜನ ವಿಮಾನ ನಿಲ್ದಾಣಕ್ಕೆ ಬರಬೇಕಾಗಿರುತ್ತದೆ. ಆಗ, ಎಲ್ಲರೂ ಹೋಗಲು ಸಾಧ್ಯವಾಗದು. ವಿದ್ಯುದ್ದೀಕರಣದ ಜತೆಗೆ ಕ್ರಾಸಿಂಗ್ ಸ್ಟೇಷನ್ ನಿರ್ಮಿಸಿದರೆ, ರೈಲುಗಳ ಫ್ರಿಕ್ವೆನ್ಸಿ ಹೆಚ್ಚಿಸಬಹುದು. ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದು ತಜ್ಞರು ಹೇಳುತ್ತಾರೆ.
ಸ್ಥಳೀಯರಿಗೆ ಮರೀಚಿಕೆಯಾದ ಸೇವೆ : ಸದ್ಯಕ್ಕೆ ವಿಮಾನ ಪ್ರಯಾಣಿಕರು ಹಾಗೂ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಮಾತ್ರ ಈ ಮಾರ್ಗ ಮುಕ್ತವಾಗಿದೆ. ದೇವನಹಳ್ಳಿ ಸುತ್ತಲಿನ ನಿವಾಸಿಗಳು, ಐಟಿ ಉದ್ಯಮಿಗಳು, ಗ್ರಾಮಗಳ ಕೃಷಿ ಉತ್ಪನ್ನಗಳನ್ನು ನಗರಕ್ಕೆ ಸಾಗಿಸಲು ಅತ್ಯಂತ ಅಗ್ಗದ “ಸುಗಮ ಮಾರ್ಗ’ವೂಇದಾಗಲಿದೆ.ಈನಿಟ್ಟಿನಲ್ಲಿನೈರುತ್ಯರೈಲ್ವೆಮತ್ತು ರಾಜ್ಯ ಸರ್ಕಾರ ಗಮನಸೆಳೆಯಲು ಸ್ಥಳೀಯರು ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್)ದಿಂದ ಕೇವಲ 4-5 ಕಿ.ಮೀ.ಅಂತರದಲ್ಲಿ ನಿರ್ಮಾಣಗೊಳ್ಳುತ್ತಿರುವ ಹಾಲ್ಟ್ ಸ್ಟೇಷನ್ ಇದೆ. ಇದರಬಲಬದಿಇರುವ ವಿಮಾನ ನಿಲ್ದಾಣದ ಟರ್ಮಿನಲ್‌ವರೆಗೆ ಹೊಸ ರಸ್ತೆ ನಿರ್ಮಿಸಲಾಗಿದೆ. ಹಾಲ್ಟ್ ಸ್ಟೇಷನ್‌ನಿಂದ ಟರ್ಮಿನಲ್ ತಲುಪಲು ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಶೆಟಲ್ ಸೇವೆಗಳನ್ನೂ ಬಿಐಎಎಲ್ ಆರಂಭಿಸುವುದಾಗಿ ಪ್ರಕಟಿಸಿದೆ. ಈ ಎಲ್ಲ ವ್ಯವಸ್ಥೆಯಿಂದ ಬಿಐಎಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಸಿಬ್ಬಂದಿ ಹಾಗೂ ಲಕ್ಷಾಂತರ ಪ್ರಯಾಣಿಕರಿಗೆ ಸಾಕಷ್ಟು ಸಮಯ ಉಳಿತಾಯ ಆಗಲಿದೆ. ಸಂಚಾರದಟ್ಟಣೆ ಕಿರಿಕಿರಿಯೂ ಇರುವುದಿಲ್ಲ. ಬೆಳವಣಿಗೆ ದೃಷ್ಟಿಯಿಂದ ಇದು ಅತ್ಯಂತ ಸ್ವಾಗತಾರ್ಹ ಹೆಜ್ಜೆ ಎಂದು ಶ್ಲಾಘನೆ ವ್ಯಕ್ತವಾಗುತ್ತಿದೆ.
ಕಾಣದ ಕೈಗಳ ಪ್ರಭಾವ? : ಉದ್ದೇಶಿತ ಹಾಲ್ಟ್ ಸ್ಟೇಷನ್ ಇದುವರೆಗೆ ಆಗದಿರಲು ಹಲವುಕಾಣದಕೈಗಳ ಪ್ರಭಾವವೂ ಇದೆ. ಒಂದು ವೇಳೆ ಈ ಯೋಜನೆಗೆ ಉತ್ತಮ ಸ್ಪಂದನೆ ದೊರೆತು, ಹೆಚ್ಚು ಜನ ರೈಲು ಮಾರ್ಗದ ಮೊರೆಹೋದರೆ ಈಗಾಗಲೇ ಇರುವ ವ್ಯವಸ್ಥೆಗೆ ಸಮಸ್ಯೆ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಯೋಜನೆ ಯಶಸ್ಸಿಗೆ ಅಡ್ಡಗಾಲು ಹಾಕಲೂಬಹುದು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.
-ವಿಜಯಕುಮಾರ್ ಚಂದರಗಿ