Advertisement
ರೈಲು ನಿಲ್ದಾಣದ ಮುಖ್ಯ ದ್ವಾರ, ವಾಹನಗಳ ನಿಲುಗಡೆಯ ಸ್ಥಳದಲ್ಲಿ ಒಳಚರಂಡಿ ಅವ್ಯವಸ್ಥೆಯಿಂದಾಗಿ ಕಳೆದ ವರ್ಷ ಮಳೆಗಾಲದಲ್ಲಿ ಕೊಳಚೆ ನೀರು ತುಂಬಿ ಭಾರೀ ಸಮಸ್ಯೆಯಾಗಿತ್ತು. ಅನಂತರ ಮಳೆ ಮುಗಿದ ಬಳಿಕ ಒಳಚರಂಡಿ ಕಾಮಗಾರಿ ನಡೆಸಲಾಗಿತ್ತು. ಒಳಚರಂಡಿಯ ಪೈಪ್‌ಗ್ಳನ್ನು ಅಳವಡಿಸುವ ಕಾಮಗಾರಿ ಕಳೆದ ಬೇಸಗೆಯಲ್ಲೇ ಪೂರ್ಣಗೊಂಡಿದೆ. ಆದರೆ ಅಗೆದು ಹಾಕಿರುವ ಪ್ರಾಂಗಣವನ್ನು ಹಾಗೆಯೇ ಬಿಡಲಾಗಿದೆ. ಈ ಜಾಗ ಈಗ ಜಲ್ಲಿಕಲ್ಲು, ಮಣ್ಣು, ಗುಂಡಿಗಳಿಂದ ತುಂಬಿದೆ. ಸದ್ಯ ಬೆಂಗಳೂರು ರೈಲುಗಳ ಓಡಾಟ ಮಾತ್ರವೇ ಆರಂಭವಾಗಿದೆ. ಇತರ ರೈಲುಗಳ ಓಡಾಟ ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಹಾಗಾಗಿ ಸದ್ಯಕ್ಕೆ ಇಲ್ಲಿ ಜನಸಂದಣಿ, ವಾಹನ ನಿಲುಗಡೆ ಇಲ್ಲ. ಆದರೆ, ರೈಲು ಸೇವೆ ಪೂರ್ಣವಾಗಿ ಪುನರಾರಂಭಗೊಂಡರೆ ನಿಲ್ದಾಣಕ್ಕೆ ಬಂದು ಹೋಗುವ ಜನರಿಗೆ ಹೆಚ್ಚಿನ ತೊಂದರೆ ಎದುರಾಗಲಿದೆ ಎಂದು ಟ್ಯಾಕ್ಸಿ, ಆಟೋ ಚಾಲಕರು ಕಾಳಜಿ ವ್ಯಕ್ತಪಡಿಸಿದ್ದಾರೆ.
ಒಳಚರಂಡಿಗೆ ಸಂಬಂಧಿಸಿದ ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ ಕಾಂಕ್ರೀಟ್ ಹಾಕುವ ಕಾಮಗಾರಿ ಬಾಕಿಯಾಗಿದೆ. ಇದಕ್ಕಾಗಿ ಇಲಾಖೆಯ ಅನುಮತಿ ಕೋರಲಾಗಿದ್ದು, ದೊರೆತ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ.
-ರವಿ ಮಿತ್ತಲ್, ಅಸಿಸ್ಟೆಂಟ್ ಡಿವಿಜನಲ್ ಎಂಜಿನಿಯರ್, ರೈಲ್ವೇ ಇಲಾಖೆ