Advertisement

ಹೊಸ ಸಿನಿಮಾ ಡೈರಿ ಬಂತು

03:50 AM Mar 03, 2017 | |

ಕನ್ನಡದ ಸಿನಿಮಾ-ಟಿ.ವಿ ಕ್ಷೇತ್ರಗಳ ಸಾವಿರಾರು ಸಂಪರ್ಕಗಳನ್ನು ನಿರಂತರವಾಗಿ “ಸಿನಿಮಾ-ಟಿ.ವಿ ಡೈರೆಕ್ಟರಿ’ ಮೂಲಕ ಕಳೆದ 18 
ವರ್ಷಗಳಿಂದ ನೀಡುತ್ತಾ ಬಂದಿರುವ ಸಂಸ್ಥೆ “ನಂದಿನಿ ಪಬ್ಲಿಕೇಷನ್ಸ್‌’. ಒಂದು ವರ್ಷದ ಹಿಂದೆ ಇದರ 7ನೇ ಸಂಪುಟ ಬಿಡುಗಡೆ ಕಂಡಿತ್ತು. ಮುದ್ರಿಸಿದ ಡೈರಿಗಳು ಮುಗಿದ ಹಾಗೂ ಪ್ರತಿಗಳಿಗೆ ಬೇಡಿಕೆ ಇದ್ದ ಕಾರಣ, ಡೈರೆಕ್ಟರಿ ಈಗ ಪರಿಷ್ಕೃತಗೊಂಡಿದೆ. ಒಂದಿಷ್ಟು ಬದಲಾದ ವಿಳಾಸ ಮತ್ತು ಹೊಸ ಸಂಪರ್ಕಗಳೊಂದಿಗೆ ಹೊಸ ರೂಪದಲ್ಲಿ ಬರಲಿದೆ.

Advertisement

18 ವರ್ಷಗಳ ಹಿಂದೆ ಕೇವಲ 100 ಪುಟಗಳೊಂದಿಗೆ ಬಿಡುಗಡೆ ಕಂಡಿದ್ದ ಕೈಪಿಡಿ, ಕಳೆದ ವರ್ಷ ಫೋನ್‌, ಮೊಬೈಲ್‌,
ಇ- ಮೇಲ್‌, ವೆಬ್‌ಸೈಟ್‌ ಸೇರಿಸಿಕೊಂಡು 600ಪುಟಗಳೊಂದಿಗೆ ಬಿಡುಗಡೆಯಾಗಿತ್ತು. ಹೊಸ ಸಿನಿಮಾ ಡೈರಿ ಬಂತು ಎಂ.ಜಿ. ಲಿಂಗರಾಜ್‌ ಈ ಡೈರಿಯ ಸಂಪಾದಕರು. ಡೈರಿಗೆ ಹೊಸ ಸೇರ್ಪಡೆ ಮಾಡುವವರು ಈ ಮುಂದಿನ ವಿಳಾಸಕ್ಕೆ ಮಾಹಿತಿ ನೀಡಬಹುದು. ನಂದಿನಿ ಪಬ್ಲಿಕೇಷನ್ಸ್‌, ನಂ- 44 ವೆಂಕಟ್‌ ಬ್ಯುಸಿನೆಸ್‌ ಚೇಂಬರ್, 2ನೇ ಮೇನ್‌, ವಿನಾಯಕ ಸರ್ಕಲ್‌, ವೈಯಾಲಿಕಾವಲ್‌ ಬೆಂಗಳೂರು-560 003. 

Advertisement

Udayavani is now on Telegram. Click here to join our channel and stay updated with the latest news.

Next