Advertisement

Accident: ನಿಶ್ಚಿತಾರ್ಥ ದಿನದಂದೇ ಭೀಕರ ಅಪಘಾತದಲ್ಲಿ ಕೊನೆಯುಸಿರೆಳೆದ ನಟ ಸೂರಜ್!

11:59 AM Apr 11, 2024 | Team Udayavani |

ರಾಯ್‌ ಪುರ್(ಚತ್ತೀಸ್‌ ಗಢ್):‌ ನಟ ಸೂರಜ್‌ ಮೆಹರ್‌ ಬುಧವಾರ (ಏ.10) ತಡರಾತ್ರಿ ಸಿನಿಮಾ ಚಿತ್ರೀಕರಣ ಮುಗಿಸಿ ಮನೆಗೆ ವಾಪಸ್‌ ಆಗುತ್ತಿದ್ದ ಸಂದರ್ಭದಲ್ಲಿ ಕಾರು ಪಿಕ್‌ ಅಪ್‌ ಟ್ರಕ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಸೂರಜ್‌ ಕೊನೆಯುಸಿರೆಳೆದಿರುವ ಘಟನೆ ರಾಯ್‌ ಪುರ್‌ ನಲ್ಲಿ ನಡೆದಿದೆ.

Advertisement

ಇದನ್ನೂ ಓದಿ:Rajasthan Royals; ಮೊದಲ ಸೋಲನುಭವಿಸಿದ ಸಂಜು ಸ್ಯಾಮ್ಸನ್ ಗೆ ಭಾರಿ ದಂಡ ವಿಧಿಸಿದ ಬಿಸಿಸಿಐ

ವಿಪರ್ಯಾಸ ಎಂದರೆ ನಟ ಸೂರಜ್‌ ಮೆಹರ್‌ ನಿಶ್ಚಿತಾರ್ಥ ನೆರವೇರಿದ (ಬುಧವಾರ) ದಿನದಂದೇ ಕಾರು ಅಪಘಾತದಲ್ಲಿ ಇಹಲೋಕ ತ್ಯಜಿಸಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿ ಪ್ರಕಾರ, ಸೂರಜ್‌ ಕಾರು ಪಿಕ್‌ ಅಪ್‌ ಟ್ರಕ್‌ ಗೆ ಡಿಕ್ಕಿಹೊಡೆದಿತ್ತು. ಸೂರಜ್‌(40ವರ್ಷ) “ಆಖ್ರಿ ಫೈಸ್ಲಾ” ಸಿನಿಮಾ ಚಿತ್ರೀಕರಣ ಮುಗಿಸಿ ವಾಪಸ್‌ ಬರುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿತ್ತು.

ಚತ್ತೀಸ್‌ ಗಢ್‌ ಸಿನಿಮಾದಲ್ಲಿ ಸೂರಜ್‌ ವಿಲನ್‌ ಪಾತ್ರಗಳ ಮೂಲಕ ಚಿರಪರಿಚಿತರಾಗಿದ್ದರು. ಅಪಘಾತ ನಡೆದ ಕೂಡಲೇ ಸೂರಜ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಸೂರಜ್‌ ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದರು.

Advertisement

ಘಟನೆಯಲ್ಲಿ ಸೂರಜ್‌ ಕಾರು ಚಾಲಕ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next