Advertisement

ಭರವಸೆ ಈಡೇರುವ ವಿಶ್ವಾಸಾರ್ಹದಲ್ಲಿ ಕೈ ನಾಯಕರು

02:15 AM Jul 13, 2017 | |

ಸುಳ್ಯ : ನಗರದ ಒಕ್ಕಲಿಗ ನಾಯಕರ ಅಸಮಾಧಾನ, ಬ್ಲಾಕ್‌ ಕಾಂಗ್ರೆಸ್‌ನಲ್ಲಿರುವ ಅವ್ಯವಸ್ಥೆ ಸರಿಪಡಿಸಲು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಹಾಗೂ ಎಐಸಿಸಿ ಮೈಸೂರು ವಿಭಾಗ ಕಾರ್ಯದರ್ಶಿ ವಿಷ್ಣುನಾಥನ್‌ ಅವರಿಗೆ ಮನವರಿಕೆ ಮಾಡಿಕೊಟ್ಟು, ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಸುಳ್ಯ ಮಾಜಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಮನೆಯಲ್ಲಿ ಬುಧವಾರ ಒಕ್ಕಲಿಗ ಹಾಗೂ ಇತರೆ ಸಮುದಾಯ ನಾಯಕರ ಉಪಸ್ಥಿತಿಯಲ್ಲಿ ಅತೃಪ್ತರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಪಕ್ಷ ಇದ್ದರೆ ನಾವು. ನಿಮ್ಮ ಬೇಡಿಕೆಗಳ ಬಗ್ಗೆ ನನ್ನ ಸಹಮತವಿದೆ. ಅಧಿಕಾರ ಇಲ್ಲದಿದ್ದಾಗಲೂ 3 ದಶಕಗಳ ಕಾಲ ಪಕ್ಷ ಸಂಘಟಿಸಿದ್ದೀರಿ. ಅದರ ಅರಿವಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಅನ್ನು ಬೆಂಬಲಿಸುತ್ತಿರುವ ಪ್ರಬಲ ಸಮುದಾಯದಲ್ಲಿ ಒಕ್ಕಲಿಗ ಸಮುದಾಯವೂ ಒಂದು. ನಿಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಬಗ್ಗೆ ಹಿಂದಿನಿಂದಲೂ ಧ್ವನಿ ಎತ್ತಿದ್ದೇನೆ ಎಂದರು.

ಮನವರಿಕೆ ಪ್ರಯತ್ನ
ಮಾಜಿ ಜಿಲ್ಲಾ ಪರಿಷತ್‌ ಸದಸ್ಯ ಭರತ್‌ ಮುಂಡೋಡಿ, ಪಕ್ಷ ಸಂಘಟನೆಯಲ್ಲಿ ದುಡಿದಿದ್ದೇವೆ. ಆದರೆ ಅಧ್ಯಕ್ಷರನ್ನು ಬದಲಾಯಿಸುವ ಸಂದರ್ಭ ನಡೆದುಕೊಂಡ ರೀತಿ ಸರಿಯಿಲ್ಲ. ಆದರೆ ಹಾಲಿ ಅಧ್ಯಕ್ಷರ ಬದಲಾಯಿಸಲು ನಾವು ಬೇಡಿಕೆಯಿಡುತ್ತಿಲ್ಲ. ಹಾಗೆ ಮಾಡುವುದು ಆ ಸಮುದಾಯಕ್ಕೆ ಎಸಗುವ ಅನ್ಯಾಯ. ಮೂರು ದಶಕಗಳ ಕಾಲ ದುಡಿದ ನಾವು ಹಿರಿಯರಾಗಿದ್ದು, ಅಧಿಕಾರ ಬಯಸುತ್ತಿಲ್ಲ. ಆದರೆ ನಮ್ಮ ಸಮುದಾಯದ ಯುವ ನಾಯಕರನ್ನು ಪರಿಗಣಿಸಿ ಎಂದರು.

ಇದೇ ಸಂದರ್ಭ ಪಕ್ಷದ ನಾಯಕರಾದ ಮಹಮ್ಮದ್‌ ಕುಂಞ ಗೂನಡ್ಕ, ಚಂದ್ರಲಿಂಗಂ ಅವರೂ, ಒಕ್ಕಲಿಗ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡುವ ಅಗತ್ಯದ ಕುರಿತು ವಿವರಿಸಿದರು. ಮಾಜಿ ಅಧ್ಯಕ್ಷ ವೆಂಕಪ್ಪ ಗೌಡ, ಪಿ.ಸಿ. ಜಯರಾಮ್‌ ಸಹಿತ ನೂರರಷ್ಟು ಮಂದಿ ನಾಯಕರು ಉಪಸ್ಥಿತರಿದ್ದರು.

Advertisement

ಸುದ್ದಿಗೋಷ್ಠಿಗೆ ಗೈರು
ಜಿಲ್ಲಾಧ್ಯಕ್ಷರು ಮಾಜಿ ಅಧ್ಯಕ್ಷರ ಮನೆಗೆ ಭೇಟಿ ಸಂದರ್ಭ ಒಕ್ಕಲಿಗ ಸಮುದಾಯ ಮಾತ್ರವಲ್ಲದೇ ಅವರನ್ನು ಬೆಂಬಲಿಸುವ ಮುಸ್ಲಿಂ, ತಮಿಳು ಹಾಗೂ ಇತರೆ ಸಮುದಾಯಗಳ ನಾಯಕರೂ ಹಾಜರಿದ್ದು, ಒಕ್ಕಲಿಗ ನಾಯಕರಿಗೆ ಪ್ರಾತಿನಿಧ್ಯ ನೀಡುವ ಕುರಿತು ಪ್ರಸ್ತಾಪಿಸಿದರು. ಭರವಸೆ ದೊರೆತ ಬಳಿಕನಡೆದ ಜಿಲ್ಲಾಧ್ಯಕ್ಷರ ಸುದ್ದಿಗೋಷ್ಠಿ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಸಭೆಯಲ್ಲಿ ಅತೃಪ್ತ ನಾಯಕರು ಭಾಗವಹಿಸಿಲಿಲ್ಲ.

ಭರವಸೆ ದೊರೆತರೆ 
ಸಮಾವೇಶದಲ್ಲಿ ಭಾಗಿ

ಒಕ್ಕಲಿಗ ನಾಯಕರಿಗೆ ಮುಂದಿನ ಬಾರಿ ಶಾಸಕ ಅಥವಾ ವಿಧಾನಪರಿಷತ್‌ ಹುದ್ದೆ ಕಲ್ಪಿಸುವುದು, ಸರಕಾರದಿಂದ ತಾಲೂಕಿನ ಅಭಿವೃದ್ಧಿಗೆ ಅನುದಾನ ನೀಡುವ ಮೂಲಕ ಪಕ್ಷ ಸಂಘಟನೆಗೆ ಒತ್ತು, ಬ್ಲಾಕ್‌ ಕಾಂಗ್ರೆಸ್‌ ಹುದ್ದೆ ಅವಕಾಶ ವಂಚಿತರಿಗೆ ಪರ್ಯಾಯ ಸ್ಥಾನಮಾನ, ಪಕ್ಷದ ಹಿರಿಯ ನಾಯಕರಿಗೆ ಸೂಕ್ತ ಹುದ್ದೆ ಕಲ್ಪಿಸುವ ಬಗ್ಗೆ ಜು. 15ರಂದು ಸುಳ್ಯ ಕಾರ್ಯಕರ್ತರ ಸಮಾವೇಶವಕ್ಕೆ ಭೇಟಿ ನೀಡುವ ಮುನ್ನ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್‌ ಅವರಿಗೆ ಮನವಿ ಸಲ್ಲಿಸುವುದು. ವಿಶ್ವನಾಥನ್‌ ಅವರಿಂದ ವಿಶ್ವಾಸಾರ್ಹ ಭರವಸೆ ದೊರೆತಲ್ಲಿ ಮಾತ್ರ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next