Advertisement

Gundlupete: ಕಳಚಿದ ಚಲಿಸುತ್ತಿದ್ದ ಬಸ್ಸಿನ ಮುಂಬದಿ ಚಕ್ರ: ಪ್ರಯಾಣಿಕರು ಪಾರು

07:16 PM Aug 29, 2024 | Team Udayavani |

ಗುಂಡ್ಲುಪೇಟೆ: ಚಲಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ನ ಮುಂಬದಿ ಚಕ್ರ ಕಳಚಿ ಬಿದ್ದಿರುವ ಘಟನೆ ತಾಲೂಕಿನ ಕೋಡಹಳ್ಳಿ ಗ್ರಾಮದ ಸಮೀಪದಲ್ಲಿ ನಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

Advertisement

ಗುಂಡ್ಲುಪೇಟೆ-ಚಾಚಹಳ್ಳಿ ಮಾರ್ಗವಾಗಿ ಪ್ರಯಾಣಿಕರನ್ನು ತುಂಬಿಕೊಂಡು ಸಂಚರಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ನ ಮುಂಬದಿ ಚಕ್ರದ ರಾಡ್ ಹಠಾತ್ ತುಂಡಾಗಿದೆ. ಈ ವೇಳೆ ಬಸ್ ರಸ್ತೆಗೆ ಅಪ್ಪಳಿಸಿದ್ದು, ವಾಹನದ ವೇಗ ಕಡಿಮೆಯಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಬಸ್ ನಲ್ಲಿ ವಿದ್ಯಾರ್ಥಿಗಳು, ಪ್ರಯಾಣಿಕರು ಸೇರಿ 55ಕ್ಕೂ ಅಧಿಕ ಮಂದಿ ಇದ್ದರು ಎನ್ನಲಾಗುತ್ತಿದ್ದು, ಸದ್ಯ ಎಲ್ಲರೂ ಪಾರಾಗಿದ್ದಾರೆ.

ಡಿಪೋ ವ್ಯವಸ್ಥಾಪಕರ ವಿರುದ್ಧ ಆಕ್ರೋಶ: ತಾಲೂಕಿನ ಗ್ರಾಮೀಣ ಪ್ರದೇಶಗಳೊಳಗೆ ಸಂಚರಿಸುವ ಅನೇಕ ಸಾರಿಗೆ ಬಸ್‍ಗಳು ಸುಸ್ಥಿತಿಯಲ್ಲಿಲ್ಲ. ಈ ಕಾರಣದಿಂದ ಹಿಂದೆಯೂ ಕೂಡ ಹಲವು ಘಟನೆಗಳು ಸಂಭವಿಸಿವೆ. ಇದಕ್ಕೆ ಡಿಪೋ ವ್ಯವಸ್ಥಾಪಕರ ನಿರ್ಲಕ್ಷ್ಯವೇ ಕಾರಣ. ಕೂಡಲೇ ಎಚ್ಚೇತ್ತುಕೊಳ್ಳದಿದ್ದರೆ ಮುಂದೆ ಜರುಗುವ ಘಟನೆಗಳಿಗೆ ಅವರೇ ನೇರ ಹೊಣೆಯಾಗುತ್ತಾರೆ ಎಂದು ಪ್ರಯಾಣಿಕರು ಅಸಮಾಧಾನ ಹೊರ ಹಾಕಿದ್ದಾರೆ.

ಹಳೇ ಬಸ್ ಕಾರಣದಿಂದ ಅವಾಂತರ: ಗುಂಡ್ಲುಪೇಟೆ ಕೆಎಸ್‍ಆರ್‍ಟಿಸಿ ಬಸ್ ಗಳನ್ನು ನಿರ್ವಹಣೆ ಮಾಡುವಲ್ಲಿ ಸಿಬ್ಬಂದಿ ವರ್ಗದವರು ನಿರ್ಲಕ್ಷ್ಯ ವಹಿಸಿದ್ದಾರೆ. ಗುಂಡ್ಲುಪೇಟೆ-ಚಾಚಹಳ್ಳಿ ಮಾರ್ಗವಾಗಿ ಚಲಿಸುತ್ತಿದ್ದ ಬಸ್ ಕೂಡ ಹಳೆಯದಾದ ಕಾರಣ ಅವಘಡ ಸಂಭವಿಸಿದೆ. ಆದ್ದರಿಂದ ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಕ್ರಮವಹಿಸಿ, ಡಿಪೋ ವ್ಯವಸ್ಥಾಪಕರಿಗೆ ಖಡಕ್ ಸೂಚನೆ ನೀಡಬೇಕೆಂದು ಪ್ರಯಾಣಿಕರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next