Advertisement
ಮೃತ ಶೈಲೇಶ್ ಪಟೇಲ್ (45) ಬಿಜೆಪಿಯ ವಾಪಿ ತಾಲೂಕು ಘಟಕದ ಉಪಾಧ್ಯಕ್ಷರಾಗಿದ್ದರು. ಇವರು ಕೋಚರ್ವ ಗ್ರಾಮದ ನಿವಾಸಿಯಾಗಿದ್ದರು ಎನ್ನಲಾಗಿದ್ದು.
ದೇವಸ್ಥಾನದ ಹೊರಗೆ ಕಾಯುತ್ತಿದ್ದರು, ಆಗ ಬೈಕಿನಲ್ಲಿ ದುಷ್ಕರ್ಮಿಗಳು ಶೈಲೇಶ್ ಎದೆಗೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಕೂಡಲೇ ಸ್ಥಳೀಯರು ಶೈಲೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯ ಕುರಿತು ಹೇಳಿಕೆ ನೀಡಿದ ಶೈಲೇಶ್ ಪತ್ನಿ ಕೆಲವು ಪರಿಚಿತ ವ್ಯಕ್ತಿಗಳೊಂದಿಗಿನ ಹಳೆಯ ಜಗಳ ಕೊಲೆಗೆ ಕಾರಣವಾಗಿರಬಹುದು ಎಂದು ಆರೋಪಿಸಿದ್ದಾರೆ.
ಆರೋಪಿಗಳ ಪತ್ತೆಗೆ ಪೊಲೀಸರು ಗಡಿ ಭಾಗದಲ್ಲಿ ನಾಕಾಬಂಧಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ.
Related Articles
Advertisement