Advertisement

ಗುಜರಾತ್‌ ಶಾಲಾ ಮಕ್ಕಳು ಹಾಜರಿ ಕರೆವಾಗ ಜೈಹಿಂದ್‌, ಜೈಭಾರತ್‌ ಅಂತಾರೆ

05:41 AM Jan 01, 2019 | Team Udayavani |

ಅಹ್ಮದಾಬಾದ್‌ : ಗುಜರಾತ್‌ ಶಾಲಾ ಮಕ್ಕಳು ಇಂದು ಜನವರಿ 1 ರಿಂದ ತರಗತಿ ಶಿಕ್ಷಕರು ಹಾಜರಿ ಕರೆಯುವಾಗ ‘ಪ್ರಸೆಂಟ್‌ ‘ ಎನ್ನುವಂತಿಲ್ಲ. ಅವರು ‘ಜೈಹಿಂದ್‌’ ಅಥವಾ ‘ಜೈ ಭಾರತ್‌’ ಎನ್ನಬೇಕಾಗುತ್ತದೆ. 

Advertisement

ಶಾಲಾ ಮಕ್ಕಳಲ್ಲಿ ಆರಂಭದಿಂದಲೇ ದೇಶ ಪ್ರೇಮವನ್ನು ಜಾಗೃತಗೊಳಿಸುವುದು ಈ ಕ್ರಮದ ಉದ್ದೇಶ ಎಂದು ಸರಕಾರ ಹೇಳಿದೆ.

ಗುಜರಾತಿನ ಪ್ರಾಥಮಿಕ ಮತ್ತು ಹೈಸ್ಕೂಲ್‌ ಶಿಕ್ಷಣದ ನಿರ್ದೇಶನಾಲಯ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಆ ಪ್ರಕಾರ 1ರಿಂದ 12ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಇಂದಿನಿಂದ ತರಗತಿಯಲ್ಲಿ  ಹಾಜರಿ ಕರೆಯುವಾಗ ಜೈಹಿಂದ್‌ ಅಥವಾ ಜೈ ಭಾರತ್‌ ಎಂದು ಹೇಳುತ್ತಾರೆ.

ಗುಜರಾತಿನ ಅನುದಾನಿತ ಶಾಲೆಗಳು, ಸ್ವಂತ ಹಣಕಾಸಿನ ಶಾಲೆಗಳು ಕೂಡ ಸರಕಾರದ ಈ ಅಧಿಸೂಚನೆಯಂತೆ ನಡೆದುಕೊಳ್ಳಬೇಕಾಗಿದೆ. 

ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಹೈಸ್ಕೂಲ್‌ ಗಳಲ್ಲಿ ಈ ಹೊಸ ಪದ್ಧತಿಯನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರುವಂತೆ ಶಿಕ್ಷಕರಿಗೆ, ಶಿಕ್ಷಣಾಧಿಕಾರಿಗಳು ಆದೇಶಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next