Advertisement

ಗುಜರಾತ್‌: ಮೊದಲ ಹಂತದ ಮತದಾನ ಅಂತ್ಯ; ಸಂಜೆ 4ರ ವರೆಗೆ ಶೇ.60

07:20 PM Dec 09, 2017 | Team Udayavani |

ಹೊಸದಿಲ್ಲಿ : ಗುಜರಾತ್‌ ವಿಧಾನಸಭೆಗೆ ಇಂದು ಶನಿವಾರ ನಡೆದಿರುವ ಮೊದಲ ಹಂತದ ಚುನಾವಣೆಯ ಮತದಾನ ಅಂತ್ಯಗೊಂಡಿದೆ. ಸಂಜೆ 4 ಗಂಟೆಯ ವರೆಗೆ ಶೇ.60 ಮತದಾನವಾಗಿರುವುದಾಗಿ ತಿಳಿದು ಬಂದಿದೆ. 

Advertisement

ಸಂಜೆ 5ರ ವರೆಗೆ ನಡೆದಿರುವ ಮತದಾನದ ಲಭ್ಯ ಕ್ಷೇತ್ರವಾರು ವಿವರ ಇಂತಿವೆ :

ನರ್ಮದಾ ಶೇ.22, ಸೋಮನಾಥ್‌ 70, ನವಸಾರಿ 75, ಬೋತಾಡ್‌ 60, ಸುರೇಂದ್ರ ನಗರ 65, ಕಚ್‌ 63, ಜಾಮ್‌ನಗರ 65, ದ್ವಾರಕಾ 63, ಪೋರಬಂದರ್‌ 60, ಭಾವನಗರ್‌ 62, ತಾಪಿ 73, ದಾಂಗ್‌ ಶೇ.70.

ಮೊದಲ ಹಂತದ ಚುನಾವಣೆಯಲ್ಲಿ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ ಪ್ರಾಂತ್ಯಗಳಿಗೆ ಒಳಪಟ್ಟ 89 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಇಂದು ಶನಿವಾರ ಬೆಳಗ್ಗೆ 8 ಗಂಟೆಗೆ ಸರಿಯಾಗಿ ಮತದಾನ ಆರಂಭವಾಯಿತು.

ಮೊದಲ ಹಂತದ ಚುನಾವಣಾ ಕಣದಲ್ಲಿ ಒಟ್ಟು 977 ಅಭ್ಯರ್ಥಿಗಳು ಇದ್ದಾರೆ. ಸುಮಾರು 2.12 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.

Advertisement

ಆಳುವ ಬಿಜೆಪಿ ಐದನೇ ಬಾರಿಗೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಕಾಂಗ್ರೆಸ್‌ ತನ್ನ ಚುನಾವಣಾ ಭವಿಷ್ಯವನ್ನು ಉಜ್ವಲಗೊಳಿಸುವ ನಿರೀಕ್ಷೆ ಹೊಂದಿದೆ. 

ಡಿ.14ರಂದು ನಡೆಯುವ ಎರಡನೇ ಹಂತದ ಮತದಾನದಲ್ಲಿ 93 ಸೀಟುಗಳು ನಿರ್ಧರಿಸಲ್ಪಡಲಿವೆ. ಗುಜರಾತ್‌ನಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 182. ಮತ ಎಣಿಕೆ ಕಾರ್ಯ ಡಿ.18ರಂದು ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next