Advertisement
70 ಮಂದಿ ಅಭ್ಯರ್ಥಿಗಳನ್ನು ಒಳಗೊಂಡ ಈ ಪಟ್ಟಿಯಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾಣಿ (ರಾಜ್‌ಕೋಟ್ ಪಶ್ಚಿಮ ಕ್ಷೇತ್ರದಿಂದ), ಉಪ ಮುಖ್ಯಮಂತ್ರಿ ನಿತಿನ್‌ಭಾಯ್ ಪಟೇಲ್ (ಮೆಹಸಾನಾ ಕ್ಷೇತ್ರ) ಮತ್ತು ಗುಜರಾತ್ ಬಿಜೆಪಿ ಅಧ್ಯಕ್ಷ ಜಿತುಭಾಯ್ ವಘಾನಿ (ಭಾವನಗರ ಪಶ್ಚಿಮ) ಅವರ ಹೆಸರುಗಳು ಸೇರಿವೆ.
Related Articles
Advertisement
ಈ ಮೊದಲ ಪಟ್ಟಿಯ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಭೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್, ಸುಶ್ಮಾ ಸ್ವರಾಜ್ ಮತ್ತು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯ ಇತರ ಸದಸ್ಯರು ಪಾಲ್ಗೊಂಡಿದ್ದರು.
ಗುಜರಾತ್ ವಿಧಾನಸಭಾ ಚುನಾವಣೆ ಡಿಸೆಂಬರ್‌ನಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ. 89 ಸ್ಥಾನಗಳಿಗೆ ನಡೆಯುವ ಮೊದಲ ಹಂತದ ಚುನಾವಣೆಯು ಡಿ.9ರಂದು ಹಾಗೂ 93 ಸ್ಥಾನಗಳಿಗೆ ನಡೆಯುವ ಚುನಾವಣೆ ಡಿ.14ರಂದು ನಡೆಯಲಿದೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಡಿ.18ರಂದು ಪ್ರಕಟಗೊಳ್ಳಲಿದೆ.