ನವದೆಹಲಿ: ಭಾರತೀಯ ಕೈಗಾರಿಕೆಗಳ ಬೇಡಿಕೆ ಮತ್ತು ಸರಬರಾಜು ಸ್ಥಿರವಾಗಿದ್ದು, ಅಕ್ಟೋಬರ್‌ನಲ್ಲಿ ಕೈಗಾರಿಕಾ ಚಟುವಟಿಕೆಗಳು ದಾಖಲೆಯ ಬೆಳವಣಿಗೆ ಕಂಡಿದೆ.
ಜತೆಗೆ ಕಳೆದ ಮೂರು ವರ್ಷಗಳಲ್ಲೇ ಅತಿ ಹೆಚ್ಚು ಸಂಖ್ಯೆಯ ಉದ್ಯೋಗಿಗಳನ್ನು ಭಾರತೀಯ ಕೈಗಾರಿಕೆಗಳು ಕಳೆದ ತಿಂಗಳು ನೇಮಕ ಮಾಡಿಕೊಂಡಿವೆ.
ಡಾಲರ್ ಎದುರು ರೂಪಾಯಿ ಕುಸಿತ ಸೇರಿದಂತೆ ಹಣದುಬ್ಬರದ ಹೊರತಾಗಿಯೂ ದೇಶದಲ್ಲಿ ಈ ಬೆಳವಣಿಗೆ ಸಕಾರಾತ್ಮಕ ಎನಿಸಿದೆ.
ಎಸ್ ಆ್ಯಂಡ್ ಪಿ ಗ್ಲೋಬಲ್ ವರದಿಯ ಪ್ರಕಾರ, ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರಸ್ ಇಂಡೆಕ್ಸ್ ಸೆಪ್ಟೆಂಬರ್‌ನಲ್ಲಿ 55.1 ಇದ್ದದು, ಅಕ್ಟೋಬರ್‌ನಲ್ಲಿ 55.3ಕ್ಕೆ ಏರಿಕೆಯಾಗಿದೆ.
“ಅಕ್ಟೋಬರ್‌ನಲ್ಲಿ ಭಾರತೀಯ ಉತ್ಪಾದನಾ ವಲಯವು ಚೇತರಿಕೆ ಕಂಡಿದೆ. ಬೆಳವಣಿಗೆಯ ವೇಗದಲ್ಲಿ ಕಡಿತದ ಹೊರತಾಗಿಯೂ ಕೈಗಾರಿಕೆಗಳ ಆರ್ಡರ್‌ಗಳು ಮತ್ತು ಉತ್ಪಾದನೆಯಲ್ಲಿ ಏರಿಕೆ ಆಗಿದೆ,’ ಎಂದು ತಜ್ಞರು ತಿಳಿಸಿದ್ದಾರೆ.