Advertisement

ಮಕ್ಕಳ ಸಾಂಸ್ಕೃತಿಕ ಪ್ರತಿಭೆ ಬೆಳೆಸಿ

12:10 PM Jan 23, 2018 | |

ವಾಡಿ: ಶೈಕ್ಷಣಿಕ ಜೀವನದಲ್ಲಿ ಮಕ್ಕಳು ಅಂಕಗಳಿಕೆಗೆ ಮಹತ್ವ ನೀಡಿದಂತೆ ಸಾಮಾನ್ಯ ಜ್ಞಾನವನ್ನು ಸಂಪಾದಿಸಬೇಕು. ಶಿಕ್ಷಕರು ಮಕ್ಕಳಲ್ಲಿ ಸಾಂಸ್ಕೃತಿಕ ಪ್ರತಿಭೆ ಜಾಗೃತಗೊಳಿಸಬೇಕು ಎಂದು ನಿವೃತ್ತ ಕೃಷಿ ಅಧಿಕಾರಿ, ಶ್ರೀಶೈಲ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಲ್ಯಾಣರಾವ ಶೆಳ್ಳಗಿ ಹೇಳಿದರು.

Advertisement

ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ 121ನೇ ಜನ್ಮದಿನದ ಅಂಗವಾಗಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ, ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ (ಎಐಡಿಎಸ್‌ಒ) ಹಾಗೂ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂಥ್‌ ಆರ್ಗನೈಸೇಷನ್‌ (ಎಐಡಿವೈಒ) ಸ್ಥಳೀಯ ಸಮಿತಿಗಳ ಆಶ್ರಯದಲ್ಲಿ ಪಟ್ಟಣದ ಮಲ್ಲಿಕಾರ್ಜುನ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿವಿಧ ಶಾಲೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲಾ ಕೌಶಲ್ಯ ಪ್ರತಿಭೆ ಎನ್ನುವುದು ಸ್ವಾರ್ಥಕ್ಕೆ ಸೀಮಿತವಾಗದೆ, ಸಮಾಜದ ಬದಲಾವಣೆಗಾಗಿ ಬಳಕೆಯಾಗಬೇಕು ಎಂದರು.

ಎಐಡಿಎಸ್‌ಒ ಅಧ್ಯಕ್ಷ ಶರಣು ಹೇರೂರ ಮಾತನಾಡಿ, ಸ್ವಾತಂತ್ರ್ಯಾ ಸಂಗ್ರಾಮದ ರಕ್ತರಂಜಿತ ಇತಿಹಾಸವು ಬ್ರಿಟಿಷರ ದಾಸ್ಯದಿಂದ ನಮ್ಮನ್ನು ಮುಕ್ತಗೊಳಿಸಿತು. ಸ್ವಾತಂತ್ರ್ಯಾ ನಂತರ ಅಧಿಕಾರಕ್ಕೆ ಬಂದ ಸರಕಾರಗಳು ನಮ್ಮನ್ನು ಶೋಷಿಸಿವೆ. ನೇತಾಜಿ ಸುಭಾಶಚಂದ್ರ ಬೋಸ್‌ ಅವರಂತಹ ಕ್ರಾಂತಿಕಾರಿಗಳ ಜೀವನ ನಮ್ಮನ್ನು ಅನ್ಯಾಯದ ವಿರುದ್ಧ ಬಡಿದೆಚ್ಚರಿಸುತ್ತದೆ ಎಂದು ಹೇಳಿದರು.

ಎಸಿಸಿಯ ಶಂಶೇರಸಿಂಗ್‌, ಲಕ್ಷ್ಮಣ ಪುಂಡಿನ್‌ ಶಹಾ, ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಸಂಚಾಲಕ ವೀರಭದ್ರಪ್ಪ
ಆರ್‌.ಕೆ, ಮಲ್ಲಿನಾಥ ಹುಂಡೇಕಲ್‌, ಶಿವುಕುಮಾರ ಆಂದೋಲಾ, ಗುಂಡಣ್ಣ ಎಂ.ಕೆ, ಮಲ್ಲಿಕಾರ್ಜುನ ಗಂದಿ, ಶರಣು ದೋಶೆಟ್ಟಿ, ಶರಣು ವಿ.ಕೆ, ವೆಂಕಟೇಶ ಆರ್‌.ಜಿ, ಸುನೀಲ ಲಾಡ್ಲಾಪುರ, ಮಲ್ಲಣ್ಣ ದಂಡಬಾ, ಕೋಕಿಲಾ ಹೇರೂರ, ಪದ್ಮರೇಖಾ ವೀರಭದ್ರಪ್ಪ, ಸಾಯಿನಾಥ ಚಿಟೇಲಕರ, ಜಯಶ್ರೀ ಎಂ.ಕೆ ಪಾಲ್ಗೊಂಡಿದ್ದರು.

ಶ್ರೀಶರಣ ಹೊಸಮನಿ ನಿರೂಪಿಸಿದರು. ರಾವೂರ, ಇಂಗಳಗಿ, ಲಾಡ್ಲಾಪುರ, ಹಳಕರ್ಟಿ, ಬಳವಡಗಿ, ಕೊಂಚೂರ ಶಾಲೆಗಳ ವಿದ್ಯಾರ್ಥಿಗಳು ಚಿತ್ರಕಲೆ, ಗಾಯನ, ರಸಪ್ರಶ್ನೆ, ಮನೋಸಾಮರ್ಥ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next