Advertisement

ಅತಿಥಿ ಉಪನ್ಯಾಸಕರಿಗೆ ದಿನಸಿ ಕಿಟ್‌ ವಿತರಣೆ

07:45 AM May 25, 2020 | Suhan S |

ಗಂಗಾವತಿ: ಕೋವಿಡ್ ಲಾಕ್‌ಡೌನ್‌ದಿಂದ ರಾಜ್ಯದ ಅತಿಥಿ ಉಪನ್ಯಾಸಕರು ಕುಟುಂಬ ನಿರ್ವಹಣೆಗೆ ಸಂಕಷ್ಟಪಡುತ್ತಿದ್ದು ರಾಜ್ಯ ಸರಕಾರ ಅವರ ನೆರವಿಗೆ ಧಾವಿಸಬೇಕು ಎಂದು ಹೊಸಪೇಟೆ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಬೆಳಗೋಡು ಆಗ್ರಹಿಸಿದರು.

Advertisement

ನಗರದ ಶ್ರೀರಾಮುಲು ಮಹಾವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಿಗೆ ಆಹಾರಧಾನ್ಯದ ಕಿಟ್‌ ವಿತರಿಸಿ ಅವರು ಮಾತನಾಡಿದರು. ಹೆಚ್ಚಿನ ಮಟ್ಟದಲ್ಲಿ ವಿದ್ಯಾಭ್ಯಾಸ ಮಾಡಿ ಪದವಿ ಹಾಗೂ ಪಿಯುಸಿ ಕಾಲೇಜುಗಳಲ್ಲಿ ಅಲ್ಪಸ್ವಲ್ಪ ವೇತನಕ್ಕೆ ಬೋಧನೆ ಕಾರ್ಯ ಮಾಡುತ್ತಿರುವ ಉಪನ್ಯಾಸಕರು ಕೊರೊನಾ ಲಾಕ್‌ಡೌನ್‌ದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಸರಕಾರ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದರು.

ಆಡಳಿತಾಧಿಕಾರಿ ಪ್ರೊ| ಎಫ್‌.ಎಚ್‌.ಚಿತ್ರಗಾರ, ಪ್ರಾಚಾರ್ಯ ಲಲಿತಾ ಬಾವಿಕಟ್ಟಿ, ಮಾರ್ಕಂಡೇಯ, ರಮೇಶ ಪೂಜಾರ, ಸತೀಶ ಕೊತಂ ಇತರರು ಇದ್ದರು. 100ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಗೆ ಆಹಾರಧಾನ್ಯ ಕಿಟ್‌ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next